ಕಲೆಯ ಬಲದಿಂದ ಹೊಂಬೆಳಕ ಚೆಲ್ಲುತ್ತಿರುವ ವೈವಿಧ್ಯಮಯ ಕಲಾವಿದೆ ಶೃುತಿ ದಾಸ್
ಊರಿನ ಹೆಸರಿನಿಂದಾಗಿ ಅಲ್ಲಿರುವವರಿಗೆ ಮಹತ್ವತೆ ಇರುವುದುಂಟು. ಅಯೋಧ್ಯೆ, ಮಥುರಾ, ಮಿಥಿಲಾ, ಕಾಶಿ, ಉಜೈನಿ, ರಾಮೇಶ್ವರ, ಪಾಣಿಪತ್ ಮುಂತಾದ ಪ್ರದೇಶಗಳ ಜನರು ಊರುಗಳ ಪ್ರಸಿದ್ಧತೆಯಿಂದ ಗುರುತಿಸ್ಪಡುತ್ತಾರೆ. ಅವರುಗಳು ನಾವು ಇಂಥ ಊರಲ್ಲಿರುವುದು ಎಂದಾಗ ಕೇಳುಗರಿಗೆ ಏನೋ ಒಂದು ಪುಳಕ. ಕೇಳಿದವರ ಮನಸ್ಸು ವಾಯು ವೇಗದಲ್ಲಿ ಸಂಚರಿಸಿ ಆ ಊರುಗಳಿಗೆ ಸಂಬಂಧಿಸಿದ ಪೌರಾಣಿಕ, ಐತಿಹಾಸಿಕ ಮಹತ್ವವನ್ನು ಕಲ್ಪಿಸಿ ರೋಮಾಂಚನಗೊಳ್ಳುತ್ತದೆ.ಇದಕ್ಕೆ ತದ್ವಿರುದ್ಧವಾಗಿ ವಿಶಿಷ್ಟವಾದ ವ್ಯಕ್ತಿಗಳಿಂದಾಗಿ ಊರಿಗೆ ಮಹತ್ವ ಬಂದಿರುವುದನ್ನು ನಾವು ವರ್ತಮಾನ ಹಾಗೂ ಇತಿಹಾಸದಲ್ಲೂ ಕಾಣುತ್ತೇವೆ. ಕೆಲವು ಊರಿನ ಹೆಸರು ಕೇಳಿದಾಕ್ಷಣ […]