ಪಾಕಿಸ್ತಾನಕ್ಕೆ 267 ರನ್ ಸ್ಪರ್ಧಾತ್ಮಕ ಗುರಿ
ಪಲ್ಲೆಕಲೆ (ಶ್ರೀಲಂಕಾ): ಪಾಕಿಸ್ತಾನದ ವೇಗಿಗಳಾದ ಶಹೀನ್ ಆಫ್ರಿದಿ ಮತ್ತು ಹ್ಯಾರಿಸ್ ರೌಫ್ ಭಾರತ ತಂಡಕ್ಕೆ ಕಾಡಿದ್ದರು, ನಂತರ ಕಿಶನ್ ಮತ್ತು ಹಾರ್ದಿಕ್ ಭಾರತಕ್ಕೆ ಆಸರೆ ಆಗಿದ್ದಾರೆಪಾಕಿಸ್ತಾನದ ಎದುರು ಭಾರತ ತಂಡ ಆರಂಭಿಕ ವೈಫಲ್ಯದ ನಡುವೆಯೂ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯರ ಬ್ಯಾಟಿಂಗ್ ಬಲದಿಂದ ಸ್ಪರ್ಧಾತ್ಮಕ ಗುರಿಯನ್ನು ಕಲೆಹಾಕಿದೆ. 66ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ 5ನೇ ವಿಕೆಟ್ನಲ್ಲಿ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯರ 138 ರನ್ ಜೊತೆಯಾಟದ ಆಸರೆ 267 ರನ್ ಗುರಿಗೆ ಕಾರಣವಾಯಿತು.