ಮಂಗಳಮುಖಿಯರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಸೇವೆ: ದೇವರ ಭಕ್ತಿಗೆ ಲಿಂಗದ ಭೇದವಿಲ್ಲ, ಇದು ಇತಿಹಾಸದಲ್ಲೆ ಮೊದಲು
ಮಂಗಳೂರು: ನಾವೆಲ್ಲರೂ ದೇವರ ಸೃಷ್ಟಿ. ಮನುಷ್ಯ ತನ್ನ ಜೊತೆಗಾರ ಮನುಷ್ಯರಲ್ಲಿ ಭೇದವೆಣಿಸಬಹುದು ಆದರೆ ದೇವರ ಸಮ್ಮುಖದಲ್ಲಿ ಬಡವ-ಬಲ್ಲಿದ, ಹೆಣ್ಣು-ಗಂಡು, ಅಷ್ಟೇ ಏಕೆ ತೃತೀಯ ಲಿಂಗಿಗಳೂ ಸಮಾನರು. ದೇವರ ಭಕ್ತಿಗೆ ಲಿಂಗದ ಭೇದವುಂಟೆ? ಇಲ್ಲ ಎಂದು ತೋರಿಸಿಕೊಡುತ್ತಿದ್ದಾರೆ ಮಂಗಳೂರಿನ ಐವರು ತೃತೀಯ ಲಿಂಗಿಗಳು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐವರು ತೃತೀಯ ಲಿಂಗಿಗಳು ಸೇರಿ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಸೇವೆಯನ್ನು ನೀಡಲು ನಿರ್ಧರಿಸಿದ್ದಾರೆ. ಮಂಗಳೂರಿನ ಕೋಡಿಕಲ್ ಕಟ್ಟೆ ಮೈದಾನದಲ್ಲಿ ಫೆ.25 ರಂದು ಸಾಂಜೆ ಪಾವಂಜೆ ಶ್ರೀ ಜ್ಞಾನಶಕ್ತಿ […]