ದೊಡ್ಡಣಗುಡ್ಡೆ: ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರ ಶೀಚಕ್ರ ಮಂಡಲ ಪೂಜೆ ಸಂಪನ್ನ
ಉಡುಪಿ: ದೊಡ್ಡಣ್ಣಗುಡ್ಡೆ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇ.ಮೂ. ಕೃಷ್ಣಮೂರ್ತಿ ತಂತ್ರಿ ನೇತೃತ್ವದಲ್ಲಿ ಅರವಿಂದ ಹೆಬ್ಬಾರ್, ವಸಂತಲಕ್ಷ್ಮೀ ಹೆಬ್ಬಾರ್ ದಂಪತಿ ಸೇವಾರ್ಥವಾಗಿ ಏಕಕಾಲ ಶ್ರೀಚಕ್ರ ಮಂಡಲ ಪೂಜೆ ಸಂಪನ್ನಗೊಂಡಿತು. ಪ್ರಾತಃಕಾಲ ಶ್ರೀ ನಾರಿಕೇಳ ಗಣಯಾಗದೊಂದಿಗೆ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಇವರು, ದೀಪ ಪ್ರಜ್ವಲಿಸಿ ಪಂಚವರ್ಣದಿಂದ ಕೂಡಿದ ಬಿಂದುವನ್ನಿರಿಸಿ ಶ್ರೀಚಕ್ರಮಂಡಲ ರಚನೆಗೆ ಚಾಲನೆ ನೀಡಿದರು. ವಿಶೇಷವಾಗಿ ಅಲಂಕರಿಸಿದ ಮಂಟಪದೊಳಗೆ ಶ್ರೀಚಕ್ರ ಯಂತ್ರ ರಚನೆ ಮಾಡಿ ಶ್ರೀ ರಾಜರಾಜೇಶ್ವರಿಯನ್ನು ವಿವಿಧ ಪುಷ್ಪಗಳಿಂದ ಅರ್ಚಿಸಿ, […]