ದಿವ್ಯಾಂಗರ ಜೊತೆ ಕೈಜೋಡಿಸಿ ಮುಖ್ಯವಾಹಿನಿಗೆ ಕರೆತನ್ನಿ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
ಉಡುಪಿ: ಡಿ 16 ಮತ್ತು 17 ರಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಿವ್ಯಾಂಗರ ಮಾಹಿತಿ ಕಾರ್ಯಗಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು ಇದರ ಸಮಾರೋಪ ಕಾರ್ಯಕ್ರಮದ ಗೌರವ ಅಧ್ಯಕ್ಷತೆಯನ್ನು ಶ್ರೀಶ್ರೀ ವಿದ್ಯಾಸಾಗರ ತೀರ್ಥ ಶ್ರೀ ಪಾದರು ಶ್ರೀ ಪರ್ಯಾಯ ಶ್ರೀ ಕೃಷ್ಣಾಪುರ ವಹಿಸಿದ್ದು, ತಮ್ಮ ಅನುಗ್ರಹ ಭಾಷಣದಲ್ಲಿ ದಿವ್ಯಾಂಗರು ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗುವಲ್ಲಿ ಸಮಾಜದ ಎಲ್ಲಾ ನಾಗರಿಕರು ತಮ್ಮ ಕೆಲಸ ನಿರ್ವಹಿಸುವುದರೊಂದಿಗೆ ದಿವ್ಯಾಂಗರ ಜೊತೆಗೂ ಕೈ ಜೋಡಿಸಿ ಶ್ರೀ ಕೃಷ್ಣ […]
ಮುಖ್ಯಮಂತ್ರಿಗಳಿಂದ ಶ್ರೀಕೃಷ್ಣ ಮಠ ಭೇಟಿ, ಗುರುವಂದನೆ ಸಲ್ಲಿಕೆ
ಶ್ರೀಕೃಷ್ಣಮಠಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭೇಟಿ ನೀಡಿದ ಸಂದರ್ಭದಲ್ಲಿ,ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಮುಖ್ಯಮಂತ್ರಿಗಳು ದೇವರ ದರ್ಶನ ಪಡೆದು, ಗುರುಪೂರ್ಣಿಮೆ ಪ್ರಯುಕ್ತ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಕಾಷಾಯ ವಸನವಿತ್ತು ಗುರುವಂದನೆ ಸಲ್ಲಿಸಿದರು. ಪರ್ಯಾಯ ಶ್ರೀಪಾದರು ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಚಿವರುಗಳಾದ ಆರ್.ಅಶೋಕ್, ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕರಾದ ಕೆ.ರಘುಪತಿ ಭಟ್, ಬೈಂದೂರು ಶಾಸಕರಾದ ಸುಕುಮಾರ್ ಶೆಟ್ಟಿ ,ಕರಾವಳಿ ಪ್ರಾಧಿಕಾರದ ಮಟ್ಟಾರ್ […]