ಶ್ರೀ ವೆಂಕಟರಮಣ ಕಾಲೇಜು: ಶೇ 100 ಫಲಿತಾಂಶ; ರಾಜ್ಯ ಮಟ್ಟದಲ್ಲಿ ಒಟ್ಟು 9 ರ‍್ಯಾಂಕ್

ಕುಂದಾಪುರ: ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಶೇ 100 ಫಲಿತಾಂಶದೊಂದಿಗೆ ಸಾಧನೆ ಮೆರೆದಿದ್ದು , ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಸಂಜನಾ ಎನ್ ಹಾಗೂ ಮಾನ್ಯ 592 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 7 ನೇ ರ‍್ಯಾಂಕ್, ಸುಜಯಾ ಎಚ್‌ ಮತ್ತು ಅನಿರುದ್ದ್‌ ಶೇಟ್‌ 591 ಅಂಕಗಳೊಂದಿಗೆ 8 ನೇ ರ‍್ಯಾಂಕ್ , ಪೂಜಾ ಕಾರಂತ 590 ಅಂಕಗಳೊಂದಿಗೆ 9ನೇ ರ‍್ಯಾಂಕ್, ನಮ್ರತಾ 589 ಅಂಕಗಳೊಂದಿಗೆ 10ನೇ ರ‍್ಯಾಂಕ್ […]

ಭಾಷಣ ಸ್ಪರ್ಧೆ: ಶ್ರೀ ವೆಂ. ಪ. ಪೂ. ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಶ್ರೀ ಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ವತಿಯಿಂದ ಡಿ.10 ರಂದು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ದಿವೀಶ್ ಪ್ರಥಮ ಸ್ಥಾನ, ತನುಶ್ರೀ ದ್ವಿತೀಯ ಸ್ಥಾನ ಹಾಗೂ ಭಗವದ್ಗೀತಾ ಕಂಠ ಪಾಠದಲ್ಲಿ ವರ್ಷಾ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಭಾವಗೀತೆ ಸ್ಪರ್ಧೆ: ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಧಾರಿಣಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಶಟಲ್ ಬ್ಯಾಡ್ಮಿಂಟನ್: ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ, ಇವರ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಶಟಲ್ ಬ್ಯಾಡ್ಮಿಂಟನ್ ನಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಧಾರಿಣಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಕುಂದಾಪುರ: ಶ್ರೀ ವೆಂಕಟರಮಣ ಪಿ.ಯು ಕಾಲೇಜಿನಲ್ಲಿ ‘ಬಿಸ್ ನೆಸ್ ಡೇ -2023’

ಕುಂದಾಪುರ: ದೇಶದ ಆರ್ಥಿಕತೆ ಬೆಳೆಯುವಲ್ಲಿ ಯುವ ಪೀಳಿಗೆಯ ಕೌಶಲ್ಯ ಅಗತ್ಯ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ವಾಣಿಜ್ಯ ಕೌಶಲ್ಯ ಉಳಿದ ಎಲ್ಲಾ ಕಡೆಗಳಿಗಿಂತ ಭಿನ್ನ ಮತ್ತು ವಿಶೇಷ. ವಿದ್ಯಾರ್ಥಿಗಳಿಗೆ ಕಾಲೇಜು ಕ್ಯಾಂಪಸ್‌ ಒಂದರಲ್ಲಿ ವಾಣಿಜ್ಯ ಮೇಳವೊಂದನ್ನು ಇಷ್ಟು ಸೃಜನಾತ್ಮಕವಾಗಿ ಆಯೋಜಿಸುತ್ತಿರುವುದು ಸ್ತುತ್ಯಾರ್ಹ ಎಂದು ಕೆನರಾ ಬ್ಯಾಂಕ್ ಮಣಿಪಾಲ ಇದರ ಜನರಲ್ ಮ್ಯಾನೇಜರ್ ಎಂ. ಜಿ. ಪಂಡಿತ್ ಅಭಿಪ್ರಾಯಪಟ್ಟರು. ಅವರು ಶನಿವಾರದಂದು ಶ್ರೀ ವೆಂಕಟರಮಣ ಪಿ.ಯು ಕಾಲೇಜಿನಲ್ಲಿ ‘ಬಿಸ್ ನೆಸ್ ಡೇ -2023’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ […]