ಅಬಾಕಸ್‌ ಇಂಟರ್‌ ನ್ಯಾಶನಲ್: ಅತ್ಯುತ್ತಮ ಶ್ರೇಣಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

ಮಣಿಪಾಲ: ಶ್ರೀ ಶಾರದ ಟೀಚರ್‌ ಟ್ರೈನಿಂಗ್‌ ಇನ್ಸ್ಟಿಟ್ಯೂಟ್, ಮಣಿಪಾಲ ಇದರ ಅಂಗಸಂಸ್ಥೆಯಾದ ಸುಲಭ್ ಸೂತ್ರ್ – ಅಬಾಕಸ್ ಮತ್ತು ವೇದಗಣಿತ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ರಾಬಾ ಇಂಟರ್‌ ನ್ಯಾಶನಲ್‌ ಕಲ್ಚರಲ್‌ ಅಕಾಡೆಮಿ ಚೆನೈ ಇವರ ಆಶ್ರಯದಲ್ಲಿ ನಡೆಸಿದ ಅಬಾಕಸ್‌ ಇಂಟರ್‌ ನ್ಯಾಶನಲ್ ಲೆವಲಿನಲ್ಲಿಅತ್ಯುತ್ತಮ ಶ್ರೇಣಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಪುರಸ್ಕಾರ ಸಮಾರಂಭವು ನ.18 ರಂದು ಕ್ರಿಸ್ಟಲ್ ಬಿಜ್ಹ್ ಹಬ್‌ನಲ್ಲಿ, ಚಂದ್ರಕಲಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಣಿಪಾಲ ಠಾಣೆಯ ಪೊಲೀಸ್ […]

ಮೇ 15 ರಿಂದ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್‌ ನಲ್ಲಿ ಭೌತಶಾಸ್ತ್ರ ಆಧಾರಿತ 3ಡಿ ಎನಿಮೇಶನ್ ರಜಾ ತರಬೇತಿ

ಮಣಿಪಾಲ: ಶ್ರೀ ಶಾರದ ಟ್ರೈನಿಂಗ್ ಇನ್ಸ್ಟಿಟ್ಯೂಟ್‌ನಲ್ಲಿ, ಮೇ 15 ರಿಂದ ಒಂದು ವಾರದ ಭೌತಶಾಸ್ತ್ರ ಆಧಾರಿತ, ಬೇಸಿಕ್ಸ್ 3ಡಿ ಎನಿಮೇಶನ್ ರಜಾ ತರಬೇತಿ ನಡೆಸಲಾಗುತ್ತಿದೆ. ಈ ತರಬೇತಿಯು ಶೈಕ್ಷಣಿಕವಾಗಿ ತುಂಬಾ ಉಪಯುಕ್ತವಾಗಿದೆ. 7ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಈ ಅವಕಾಶದ ಉಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಶ್ರೀ ಶಾರದ ಟ್ರೈನಿಂಗ್ ಇನ್ಸ್ಟಿಟ್ಯೂಟ್‌, ಡಿ.ಸಿ. ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್, 1ನೇ ಮಹಡಿಯಲ್ಲಿರುವ ಸಂಸ್ಥೆಯನ್ನು ಅಥವಾ 9901722527 ಸಂಪರ್ಕಿಸಬಹುದು.

ದಶಮಾನೋತ್ಸವ ಸಂಭ್ರಮದಲ್ಲಿ ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್

ಮಣಿಪಾಲ: ಉದ್ಯೋಗ ಆಥವಾ ನೌಕರಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕನಸು ಕಾಣುವ ಯುವತಿ/ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡಲು ನೆರವಾಗುವ ಒಂದು ವರ್ಷದ ನರ್ಸರಿ / ಮಾಂಟೆಸ್ಸರಿ ಕೋರ್ಸ್ ಅನ್ನು ಮಣಿಪಾಲದ, ಶ್ರೀ ಶಾರದ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ನಡೆಸಲಾಗುತ್ತಿದೆ. ದಶಮಾನೋತ್ಸವ ಆಚರಿಸುತ್ತಿರುವ ಈ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದಲೂ ತರಬೇತಿ ನೀಡುತ್ತಿದ್ದು, 500ಕ್ಕೂ ಮಿಕ್ಕಿ ಯುವತಿಯರಿಗೆ ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಯಶ್ವಸಿಯಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದಿಂದ ಸ್ಥಾಪಿಸಿರುವ ಈ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಾಯೋಗಿಕ ತರಬೇತಿ ನೀಡಿ, ಉದ್ಯೋಗ […]

ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್: ಟೀಚರ್ಸ್ ಟ್ರೈನಿಂಗ್ ಪ್ರವೇಶಾತಿ ಪಡೆಯಲು ಅ.20 ಕೊನೆಯ ದಿನ

ಮಣಿಪಾಲ: ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮಣಿಪಾಲದಲ್ಲಿ ಮಹಿಳೆಯರಿಗೆ ಮಾಂಟೆಸ್ಸರಿ/ನರ್ಸರಿ ಟೀಚರ್ ಟ್ರೈನಿಂಗ್ ಕೋರ್ಸಿಗೆ ಪ್ರವೇಶಾತಿ (2022-23) ಪ್ರಕ್ರಿಯೆ ಆರಂಭವಾಗಿದ್ದು, ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಅಭ್ಯರ್ಥಿಗಳು ಈ ತರಬೇತಿಗೆ ಪ್ರವೇಶ ಪಡೆದುಕೊಳ್ಳಬಹುದು. ಕೇವಲ ಕೆಲವೇ ಸೀಟುಗಳು ಲಭ್ಯವಿದ್ದು, ಆಸಕ್ತಿಯಿರುವವರು, ಹೆಚ್ಚಿನ ಮಾಹಿತಿಗಾಗಿ ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಡಿ.ಸಿ ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್ ಕಾಂಪ್ಲೆಕ್ಸ್, 1ನೇ ಮಹಡಿಯಲ್ಲಿರುವ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಶ್ರೀ ಶಾರದ ಟ್ರೈನಿಂಗ್ ಇನ್ಸ್ಟಿಟ್ಯೂಟಿನಲ್ಲಿ ಶಿಕ್ಷಕರ ದಿನಾಚರಣೆ

ಮಣಿಪಾಲ: ಸೋಮವಾರದಂದು ಮಣಿಪಾಲದ ಶ್ರೀ ಶಾರದ ಟ್ರೈನಿಂಗ್ ಇನ್ಸ್ಟಿಟ್ಯೂಟಿನಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಶಿಕ್ಷಕಿ ಚಂದ್ರಕಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರ ಪಾತ್ರ ಮುಖ್ಯ ನಮ್ಮ ಬದುಕಿನಲ್ಲಿ ಬಂದ ಪ್ರತಿಯೊಂದು ಶಿಕ್ಷಕರನ್ನು ಸ್ಮರಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯ. ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ದುಡಿದರೆ ಯಶಸ್ಸು ಖಂಡಿತ ಸಾಧ್ಯ ಎಂದರು.   ಮುಖ್ಯ ಅತಿಥಿಯಾಗಿ ಡಾ. ವಿಶ್ವನಾಥ್ ಕಾಮತ್‌ರವರು ಮಾತಾನಾಡಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಉದಾಹರಣೆ ನೀಡಿ, ಅವರು ಕ್ಷಿಪಣಿ ಜನಕ, […]