ಕೊಡವೂರು 20ನೆಯ ಬೃಹತ್ ಗ್ರಾಮ ಸಭೆ: ಸರ್ಕಾರದ ಸವಲತ್ತುಗಳ ಮಾಹಿತಿ ಮತ್ತು ಕುಂದು ಕೊರತೆ ನಿವಾರಣಾ ಕಾರ್ಯಕ್ರಮ

ಜುಲೈ 24 ರಂದು ಮಧ್ಯಾಹ್ನ 3:30 ರಿಂದ 5:30 ರವರೆಗೆ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಇಲ್ಲಿ 75 ನೆಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರಸಭೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸವಲತ್ತುಗಳ ಸಮಗ್ರ ಮಾಹಿತಿ ಕಾರ್ಯಕ್ರಮ ಹಾಗೂ ಊರಿನ ಕುಂದು ಕೊರತೆಗಳ ನಿವಾರಣೆಗಾಗಿ 20ನೆಯ ಬೃಹತ್ ಗ್ರಾಮ ಸಭೆ ನಡೆಯಲಿರುವುದು. ಅಂದು ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಮತ್ತು ಫಲಾನುಭವಿಗಳಿಗೆ ಯೋಜನಾ ಸೌಲಭ್ಯಗಳನ್ನು ದೊರಕಿಸಿಕೊಡಲಾಗುವುದು ಎಂದು ಕೊಡವೂರು ವಾರ್ಡ್ ನ ನಗರಸಭಾ ಸದಸ್ಯ ವಿಜಯ್ ಕೊಡವೂರು ತಿಳಿಸಿದ್ದಾರೆ. ಬೀದಿ ಬದಿ […]