ಶ್ರೀಕೃಷ್ಣ ಮಠದಲ್ಲಿ ತುಳಸಿ ಪೂಜೆ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಉತ್ಥಾನ ದ್ವಾದಶಿಯ ಪ್ರಾತಃಕಾಲ ತುಳಸಿ ಪೂಜೆಯನ್ನು ನೆರವೇರಿಸಿದರು.

ಮೋಹಿನಿ ರೂಪದಲ್ಲಿ ಕಂಗೊಳಿಸಿದ ಪೊಡವಿಗೊಡೆಯ ಶ್ರೀಕೃಷ್ಣ ಪರಮಾತ್ಮ

ಉಡುಪಿ: ನವರಾತ್ರಿಯ ಪ್ರಯುಕ್ತ ಶ್ರೀಕೃಷ್ಣದೇವರಿಗೆ ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ‘ಮೋಹಿನಿ’ ವಿಶೇಷ ಅಲಂಕಾರ ಮಾಡಿದರು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

ಭಗವದ್ಗೀತೆಯ ಶ್ರೀಕೃಷ್ಣನ ಸಂದೇಶಗಳು ಸಾರ್ವಕಾಲಿಕ: ರಘುಪತಿ ಭಟ್

ಉಡುಪಿ: ಭಗವದ್ಗೀತೆಯ ಮೂಲಕ ಶ್ರೀಕೃಷ್ಣ ಸಾರಿರುವ ಸಂದೇಶಗಳು ಸರ್ವಕಾಲಕ್ಕೂ ವಿಶ್ವಕ್ಕೆ ಅನ್ವಯವಾಗಲಿವೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು. ಅವರು ಶುಕ್ರವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಮತ್ತು ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಸಹಕಾರದೊಂದಿಗೆ ಆಯೋಜಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾವಿರಾರು ವರ್ಷಗಳ ಹಿಂದೆ ಶ್ರೀ ಕೃಷ್ಣ ಭೋದಿಸಿದ ಭಗವದ್ಗೀತೆಯಲ್ಲಿ ಮನುಷ್ಯನ ಸುಗಮ ಜೀವನ ವಿಧಾನ ಆಡಳಿತ ವ್ಯವಸ್ಥೆ ಸಂದೇಶಗಳು […]

ಶ್ರೀಕೃಷ್ಣಜನ್ಮಾಷ್ಟಮಿ ಸ್ಪರ್ಧಾ ಫಲಿತಾಂಶ

ಉಡುಪಿ: ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ಫಲಿತಾಂಶಗಳು ಇಂತಿವೆ: ಮುದ್ದು ಕೃಷ್ಣ ಸ್ಪರ್ಧೆ: 0-1 ವಿಭಾಗ ಪ್ರಥಮ- ಪ್ರನೂಷ್ ಆಚಾರ್ಯ ದ್ವಿತೀಯ- ಮೈಥಿಲಿ ರಾವ್, ಸಿಯಾ ರಾವ್, ವಿಧಾತ್ರಿ ಭಟ್ ತೃತೀಯ: ಇಂಚರಾ ಭಟ್ 1-3 ವಿಭಾಗ ಪ್ರಥಮ: ಶೌರಿ ಪ್ರಶಾಂತ್ ದ್ವಿತೀಯ- ಶ್ರೀನಿವಾಸ್ ಶಣೈ ತೃತೀಯ: ಸದ್ಗುಣಿ, ಅವನಿ ಕೆದಿಲಾಯ, ಮೇಧಾ ಬಾಲಕೃಷ್ಣ ವಿಭಾಗ (3-6) ಪ್ರಥಮ-ಚರಣ್ಯ ದ್ವಿತೀಯ: ಶಿವಣ್ಯ ಪೂಜಾರಿ ತೃತೀಯ: ತ್ರಿಶಾ ಕಿಶೋರ ಕೃಷ್ಣ ವಿಭಾಗ (6-10) ಪ್ರಥಮ-ಪ್ರತ್ಯೂಷ ನಾಯಕ್ ದ್ವಿತೀಯ: […]

ಸೌತ್‌ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ನೂತನ ಪರಿಕಲ್ಪನೆ: ತ್ರಿವರ್ಣದ ಬೆಳಕಿನ ರಂಗಲ್ಲಿ ಮಿಂದೇಳಲಿದೆ ಕನಕ ಗೋಪುರ!!

ಉಡುಪಿ: ಶ್ರೀಕೃಷ್ಣ ಮಠ ಹಾಗೂ ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿ ಆಶ್ರಯದಲ್ಲಿ ಸೌತ್‌ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ನೇತೃತ್ವದಲ್ಲಿ ಪಂಚಮಿ ಟ್ರಸ್ಟ್ ಹಾಗೂ ಗಾಂಧಿ ಹಾಸ್ಪಿಟಲ್ ಸಹಯೋಗದೊಂದಿಗೆ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರಥಮ ಬಾರಿಗೆ ಉಡುಪಿಯ ರಥಬೀದಿಯಲ್ಲಿರುವ ಕನಕ ಗೋಪುರವು “ತ್ರಿವರ್ಣ” ಬಣ್ಣದ ಬೆಳಕಿನೊಂದಿಗೆ ಝಗಮಗಗೊಳ್ಳಲಿದೆ. ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜುಲೈ 13 ಶನಿವಾರದಂದು 6 ಗಂಟೆಗೆ ಕನಗೋಪುರದ ಎದುರು ಉದ್ಘಾಟನೆ […]