ಉಡುಪಿ: “ಕಲರ್ಸ್ ಅಫ್‌ ಶ್ರೀ ಕೃಷ್ಣ ಲೀಲೋತ್ಸವ” ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

ಉಡುಪಿ: ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ ಉಡುಪಿ ವಲಯ, ನಿಕ್ಕಾನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಮತ್ತು ಪ್ರವಾಸೋಧ್ಯಮ ಇಲಾಖೆ ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಜ್ಯ ಮಟ್ಟದ “ಕಲರ್ಸ್ ಅಫ್‌ ಶ್ರೀ ಕೃಷ್ಣ ಲೀಲೋತ್ಸವ” ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ. ವಿಜೇತರಿಗೆ ಪ್ರಥಮ 10,000.00, ದ್ವಿತೀಯ 5,000.00, ತ್ರಿತೀಯ 3,000.00 ಹಾಗು 5 ಸಮಾಧಾನಕರ ಬಹುಮಾನಗಳು, ಆಕರ್ಷಕ ಸ್ಮರಣಿಕೆ, ವಿಶೇಷ ಉಡುಗೊರೆಗಳು ಇರಲಿದೆ. ​ಸ್ಪರ್ಧೆಯ ನಿಯಮಗಳು: ಪ್ರತಿ ಸ್ಪರ್ಧಿಯು ಗರಿಷ್ಠ ನಾಲ್ಕು ಛಾಯಾಚಿತ್ರಗಳನ್ನು​ ಕಳುಹಿಸಬಹುದು.​ […]

ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಉತ್ಸವಗಳಿಗೆ ಮಾರ್ಗಸೂಚಿ ಪ್ರಕಟ

ಮಂಗಳೂರು: ದೇಶಾದ್ಯಂತ ಸೆ. 6 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಸಂಭ್ರಮಗಳು ನಡೆಯಲಿದ್ದು, ದ.ಕ ಜಿಲ್ಲೆಯಲ್ಲಿ ಹಬ್ಬದ ಆಚರಣೆಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಆರ್ ಜೈನ್, ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಾಂಪ್ರದಾಯಿಕವಾಗಿ ಆಚರಿಸುವುದರೊಂದಿಗೆ ಮುಂಜಾಗ್ರತಾ ಕ್ರಮವಾಗಿ ಕೆಲವೊಂದು ಮಾರ್ಗಸೂಚಿ ನೀಡಲಾಗಿದ್ದು, ಸಂಘಟಕರು ಈ ಬಗ್ಗೆ ಗಮನಹರಿಸಬೇಕು. ಪೊಲೀಸ್‌ ಇಲಾಖೆಯಿಂದ ನೀಡಲಾದ ಪರವಾನಗಿಯಲ್ಲಿ ನಿಗದಿಪಡಿಸಿದ ಸಮಯದವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು. ಡಿ.ಜೆ. ಬಳಸಲು ಅವಕಾಶವಿಲ್ಲ. ಸುರಕ್ಷತೆಗೆ ವಿಶೇಷ […]

ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸಾರ್ವಜನಿಕರು

ಉಡುಪಿ: ಪರ್ಯಾಯ ಶ್ರೀಕೃಷ್ಣಾಪುರ ಮಠದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭೀಮ ಜ್ಯುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದು ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಉಪಸ್ಥಿತರಿದ್ದು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಪ್ರಸಾದವನ್ನಿತ್ತು ಅನುಗ್ರಹಿಸಿದರು. ನಂತರ ಸಾಂಪ್ರದಾಯಿಕ ಚುಕ್ಕಿ ರಂಗವಲ್ಲಿ ಸ್ಪರ್ಧೆ ನಡೆಯಿತು. ಪರ್ಯಾಯ ಮಠದ ದಿವಾನರು, ಕಾರ್ಯಕರ್ತರು ಭಾಗವಹಿಸಿದ್ದರು.

ಮುಂಡ್ಕಿನಜೆಡ್ಡು ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಅದ್ದೂರಿ ಅಷ್ಟಮಿ ಆಚರಣೆ

ಮುಂಡ್ಕಿನಜೆಡ್ಡು: ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆ, ಮೊಸರು ಕುಡಿಕೆ ಒಡೆಯುವುದು, ಇಡ್ಲಿ ತಿನ್ನುವ ಸ್ಪರ್ಧೆ ಮುಂತಾದ ಸ್ಪರ್ಧೆಗಳು ಜರುಗಿದವು. ಸ್ಪರ್ಧೆಗಳ ನಂತರ ವಿಜೇತರಿಗೆ ಬಹುಮಾನ ವಿತರಣೆ ಅದ್ದೂರಿಯಾಗಿ ನಡೆಯಿತು.

ಸೌತ್‌ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ನೂತನ ಪರಿಕಲ್ಪನೆ: ತ್ರಿವರ್ಣದ ಬೆಳಕಿನ ರಂಗಲ್ಲಿ ಮಿಂದೇಳಲಿದೆ ಕನಕ ಗೋಪುರ!!

ಉಡುಪಿ: ಶ್ರೀಕೃಷ್ಣ ಮಠ ಹಾಗೂ ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿ ಆಶ್ರಯದಲ್ಲಿ ಸೌತ್‌ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ನೇತೃತ್ವದಲ್ಲಿ ಪಂಚಮಿ ಟ್ರಸ್ಟ್ ಹಾಗೂ ಗಾಂಧಿ ಹಾಸ್ಪಿಟಲ್ ಸಹಯೋಗದೊಂದಿಗೆ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರಥಮ ಬಾರಿಗೆ ಉಡುಪಿಯ ರಥಬೀದಿಯಲ್ಲಿರುವ ಕನಕ ಗೋಪುರವು “ತ್ರಿವರ್ಣ” ಬಣ್ಣದ ಬೆಳಕಿನೊಂದಿಗೆ ಝಗಮಗಗೊಳ್ಳಲಿದೆ. ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜುಲೈ 13 ಶನಿವಾರದಂದು 6 ಗಂಟೆಗೆ ಕನಗೋಪುರದ ಎದುರು ಉದ್ಘಾಟನೆ […]