ಚಂದ್ರಯಾನ-3ರ ಹಿಂದಿದ್ದಾರೆ ಭಾರತದ ‘ರಾಕೆಟ್ ಮಹಿಳೆ’ ಎಂದು ಖ್ಯಾತಿವೆತ್ತ ರಿತು ಕರಿದಾಲ್ ಶ್ರೀವಾಸ್ತವ
ಶ್ರೀಹರಿಕೋಟಾ: ಭಾರತದ ಮೂರನೇ ಚಂದ್ರಯಾನ ಅಭಿಯಾನ ‘ಚಂದ್ರಯಾನ-3’ ಶುಕ್ರವಾರ ಮಧ್ಯಾಹ್ನ 2.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಚಂದ್ರಯಾನ-3 ರ ಹಿಂದಿರುವ ನಾರೀಶಕ್ತಿ ಭಾರತದ ಸ್ವಂತ ‘ರಾಕೆಟ್ ಮಹಿಳೆ’ ಎಂದೇ ಖ್ಯಾತರಾದ ರಿತು ಕರಿದಾಲ್ ಶ್ರೀವಾಸ್ತವ. ಮಹಿಳಾ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಪ್ರಕಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಲ್ಲಿ ರಿತು ಕರಿದಾಲ್ ಶ್ರೀವಾಸ್ತವ ಅವರು ಹಿರಿಯ ವಿಜ್ಞಾನಿಯಾಗಿದ್ದು, ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. […]