ಮಣಿಪಾಲ: ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಸರಕಾರಿ ಕೈಗಾರಿಕಾ ಕಾಲೇಜಿನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

ಮಣಿಪಾಲ: ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಮಣಿಪಾಲ ವಲಯ ವತಿಯಿಂದ ಮಣಿಪಾಲದ ಸರಕಾರಿ ಕೈಗಾರಿಕಾ ತರಬೇತಿ ಕಾಲೇಜಿನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಉಡುಪಿ ತಾಲೂಕು ಜನಜಾಗ್ರತಿ ವೇದಿಕೆ ಅಧ್ಯಕ್ಷ ಸತ್ಯಾನಂದ ನಾಯಕ್ ಮಾತನಾಡಿ, ಯೋಜನೆಯ ಹಲವಾರು ಸೌಲಭ್ಯಗಳು, ಸಮಾಜಕ್ಕೆ ಯೋಜನೆಯಿಂದ ಆಗಿರುವ ಪ್ರಯೋಜನಗಳು ಮತ್ತು, ಸ್ವಾಸ್ತ್ಯ ಸಂಕಲ್ಪದ ಉದ್ದೇಶವನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಬಾಳಿಗಾ ಆಸ್ಪತ್ರೆಯ ಹಿರಿಯ ವೈದ್ಯೆ ಡಾ. ಸೌಜನ್ಯ ಮಾತನಾಡಿ, ದುಶ್ಚಟಗಳಿಂದ ಆಗುವ […]

ಹಿರಿಯಡ್ಕ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ) ಹಿರಿಯಡ್ಕ ವಲಯ ಮತ್ತು ಸಾಮೂಹಿಕ ಸತ್ಯನಾರಾಯಣ ಸಮಿತಿ ಹಿರಿಯಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯಡ್ಕ ದೇವಾಡಿಗ ಸಭಾಭವನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಮಹಾಲಿಂಗೇಶ್ವರ ದೇವಸ್ಥಾನ ಕೊಂಡಾಡಿಯ ಪ್ರಧಾನ ಪುತೋಹಿತ ಹರೀಶ್ ಭಟ್ ಇವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಸಮಿತಿಯ ಅಧ್ಯಕ್ಷ ರಾಘವೇಂದ್ರ ನಾಯ್ಕ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಯೋಜನೆಯ ಜಿಲ್ಲಾ ಹಿರಿಯ ನಿರ್ದೇಶಕ ಶಿವರಾಯ ಪ್ರಭು ದೀಪ ಬೆಳಗಿಸಿ ಕಾರ್ಯಕ್ರಮದ […]

ಬ್ರಹ್ಮಾವರ: ರುಡ್ ಸೆಟ್ ವತಿಯಿಂದ ಉಚಿತ ಕ್ಯಾಂಡಲ್ ತಯಾರಿಕಾ ತರಬೇತಿ

ಬ್ರಹ್ಮಾವರ: ಸ್ವ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕೆ ಅನುಕರಣೀಯ ಮಾದರಿ ಎಂದು ಗುರುತಿಸಲ್ಪಟ್ಟ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ನಡೆಯುವ ರುಡ್ ಸೆಟ್ ಸಂಸ್ಥೆಯು ಬ್ರಹ್ಮಾವರದಲ್ಲಿ ಉಚಿತ ಊಟ, ವಸ್ತಿ, ಸಮವಸ್ತ್ರ ತರಬೇತಿ ಕಿಟ್ ನೊಂದಿದೆ ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ 10 ದಿನಗಳ ಕ್ಯಾಂಡಲ್ ತಯಾರಿಕೆ, ಫಿನಾಯಿಲ್ ಸೋಪ್ ಆಯಿಲ್ ತರಾರಿಕೆ […]

ಬ್ರಹ್ಮಾವರ: ಯುವಕ-ಯುವತಿಯರಿಗಾಗಿ ರುಡ್‌ಸೆಟ್‌ನಲ್ಲಿ ಉಚಿತ ಕೌಶಲ್ಯಾಭಿವೃದ್ದಿ ತರಬೇತಿ

ಬ್ರಹ್ಮಾವರ: ಸ್ವ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ, ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕೆ ಅನುಕರಣೀಯ ಮಾದರಿ ಎಂದು ಗುರುತಿಸಲ್ಪಟ್ಟ, ಯುವ ಜನರಿಗೆ ಸ್ವ ಉದ್ಯೋಗವನ್ನು ಕಲ್ಪಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಕೆನರಾ ಬ್ಯಾಂಕ್‌ಗಳ ಸಹಯೋಗದೊಂದಿಗೆ ನಡೆಯುವ ರುಡ್‌ಸೆಟ್ ಸಂಸ್ಥೆಯು ಬ್ರಹ್ಮಾವರದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾ ಪಂಚಾಯತ್, ಉಡುಪಿ ಇವರ ವತಿಯಿಂದ ಉಚಿತ ಊಟ, ವಸತಿ, ಸಮವಸ್ತ್ರ ಹಾಗೂ ತರಬೇತಿ ಕಿಟ್ ನೊಂದಿಗೆ ನಿರುದ್ಯೋಗಿ ಯುವಕ-ಯುವತಿಯರಿಗೆ […]

ಕೊಡವೂರು: ಲಕ್ಷ್ಮೀನಗರದಲ್ಲಿ ಕೃಷಿ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರ

ಕೊಡವೂರು:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್  ಉಡುಪಿ  ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಆತ್ಮ ಅನುಷ್ಠಾನ ಸಮಿತಿ ಇವರ ಸಂಯುಕ್ತ ಆಶ್ರಯದೊಂದಿಗೆ ಅಂಬಾಗಿಲು ವಲಯದ ಶಿವಾಜಿ ಪಾರ್ಕ್ ಗರ್ಡೆ ಲಕ್ಷ್ಮೀನಗರದಲ್ಲಿ ಕೃಷಿ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ  ಹಿರಿಯ ನಿರ್ದೇಶಕರ  ಶಿವರಾಯ ಪ್ರಭು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಜಿ ಪಾರ್ಕ್ ನಿರ್ವಹಣ ಸಮಿತಿ ಅಧ್ಯಕ್ಷ ಮೋಹನ್ ಸುವರ್ಣ […]