ಶ್ರೀ ದುರ್ಗಾ ಆದಿಶಕ್ತಿಕ್ಷೇತ್ರದಲ್ಲಿ ಅಭೂತಪೂರ್ವಾಗಿ ಸಂಪನ್ನಗೊಂಡ ಶ್ರೀ ಚಕ್ರ ಮಂಡಲ ಪೂಜೆ
ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಏಕಕಾಲ ಶ್ರೀಚಕ್ರ ಮಂಡಲ ಪೂಜೆಯು ಅಭೂತಪೂರ್ವವಾಗಿ ಸಂಪನ್ನಗೊಂಡಿತು. ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಋತ್ವಿಜೋತ್ತಮರ ಸಮಕ್ಷಮದಲ್ಲಿ ಬಹು ವಿಜೃಂಭಣೆಯಿಂದ ಪೂಜೆ ಸಂಪನ್ನಗೊಂಡಿತು. ಶ್ರೀಚಕ್ರ ಮಾತೆಯಾದ ರಾಜರಾಜೇಶ್ವರಿ ದೇವಿಯನ್ನು ಲಲಿತಾ ಸ್ತುತಿಯೊಂದಿಗೆ ಆರಾಧಿಸಿ ಸಂಪ್ರೀತಗೊಳಿಸುವ ಈ ಮಹಾನ್ ಪೂಜೆಗಾಗಿ ವಿಶೇಷವಾಗಿ ರಚಿಸಲ್ಪಟ್ಟ ಹೂವಿನ ಅಲಂಕೃತ ಮಂಟಪದೊಳಗೆ ಪಂಚವರ್ಣಾತ್ಮಕವಾಗಿ ರಚಿಸಲ್ಪಟ್ಟ ಶ್ರೀ ಚಕ್ರ ಯಂತ್ರ ಮಂಡಲದಲ್ಲಿ […]
ದೊಡ್ಡಣ್ಣಗುಡ್ಡೆ: ಮೇ. 4 ರಂದು ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನವೀಕೃತ ನಾಗಾಲಯದ ಪುನ: ಪ್ರತಿಷ್ಠಾ ಮಹೋತ್ಸವ
ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿ ಸಪರಿವಾರ ನಾಗದೇವರ ಪುನ: ಪ್ರತಿಷ್ಠೆ ಮೇ 4 ರಂದು ನೆರವೇರಲಿದೆ. ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಆ ಪ್ರಯುಕ್ತ ಮೇ 3ರ ಸಂಜೆ ಗಂಟೆ 5 ರಿಂದ ತೋರಣ ಉಗ್ರಾಣ ಮುಹೂರ್ತ, ವಾಸ್ತು ರಾಕ್ಷೋಜ್ಞಾದಿ ಪ್ರಕ್ರಿಯೆ, ಸಪರಿವಾರ ನಾಗ ಬಿಂಬ, ಆದಿ ವಾಸ ಪ್ರಕ್ರಿಯೆ, ಮೇ 4ರ […]