ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಲಲಿತ ಮಹಾ ತ್ರಿಪುರಸುಂದರಿ ಮಹಾಯಾಗ ಸಂಪನ್ನ
ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಲಲಿತ ಮಹಾ ತ್ರಿಪುರಸುಂದರಿ ಮಹಾ ಯಾಗವು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಯ ನೇತೃತ್ವದಲ್ಲಿ ಸ್ಥಳೀಯ ಉದ್ಯಮಿಯೋರ್ವರ ಪ್ರಾಯಶ್ಚಿತ ಪೂರ್ವಕವಾಗಿ ಸಂಪನ್ನಗೊಂಡಿತು. ದಕ್ಷಿಣ ಭಾರತದಲ್ಲಿ ಅತಿ ಎತ್ತರವಾದ ಮೇರು ಶ್ರೀ ಚಕ್ರವನ್ನು ಹೊಂದಿರುವ ಕ್ಷೇತ್ರದಲ್ಲಿ ಸಂಪನ್ನಗೊಂಡ ಈ ಮಹಾಯಾಗ ಬಹು ವಿಶಿಷ್ಟ ಹಾಗೂ ಅಪರೂಪದ್ದಾಗಿದೆ. ಸಹಸ್ರ ಸಹಸ್ರ ಸಂಖ್ಯೆಯ ಕದಳಿಹಣ್ಣನ್ನು ತ್ರಿಮಧುರಯುಕ್ತವಾಗಿ ಹೋಮಿಸಿ, ಲಲಿತಾ ಸಹಸ್ರನಾಮ ಅರ್ಚನೆಯಿಂದ ನೆರವೇರಿದ […]