ನಿನ್ನೆ ಮೊನ್ನೆ ನಮ್ಮೊಂದಿಗೆ ಹರಟೆ ಹೊಡೆಯುತ್ತಿದ್ದವರು ಈಗಿಲ್ಲ ಅಂದರೆ ನಂಬೋದು ಹೇಗೆ?:ಶ್ರದ್ದಾ ಬರೆದ ಬರಹ
ಜೀವನ ಎಷ್ಟೊಂದು ವಿಚಿತ್ರ ಅಲ್ವಾ? ನಿನ್ನೆ ಮೊನ್ನೆ ಎಲ್ಲಾ ಹಕ್ಕಿಯಂತೆ ಹಾಯಾಗಿ ಹಾರಾಡುತ್ತ ಇದ್ದ ನಾವು ಈಗ ಪಂಜರದ ಹಕ್ಕಿಯಂತೆ ಬಂಧಿಯಾಗಿದ್ದೇವೆ. ಬೆನ್ನು ಹಿಡಿದ ಬೇತಾಳನಂತೆ ಈ ರೋಗ ನಮ್ಮನ್ನು ಹಿಂಬಾಲಿಸುತ್ತಿದೆ. ಇತ್ತೀಚೆಗೆ ಮಳೆಗಾಲದ ಹೊತ್ತಿನಲ್ಲಿ ಬರುವ ಶೀತ ಜ್ವರಗಳಿಗೂ ಕರೋನಾ ಎನ್ನುವಂತಾಗಿದೆ. ಜನರು ಈ ವೈರಸ್ ಗೆ ಎಷ್ಟು ಬೆಂದು ಹೋಗಿದ್ದಾರೆ ಎಂದರೆ ಸಾಮಾನ್ಯ ಜ್ವರಕ್ಕೂ ಮದ್ದು ತರಲು ಹೋಗಲು ಹಿಂದೆ ಮುಂದೆ ನೋಡುತ್ತಾರೆ. ಇತ್ತೀಚೆಗೆ ಹಳ್ಳಿ ಪ್ರದೇಶದ ಬಡಕುಟುಂಬಗಳಿಗೆ ಕೊರೋನಾ ವೈರಸ್ ಗೆ ತುತ್ತಾಗುತ್ತಿದ್ದಾರೆ. […]