ಮಾಹೆ ಗಾಂಧಿಯನ್ ಸೆಂಟರ್ ನಲ್ಲಿ ಕಿರುನಾಟಕ ಪ್ರದರ್ಶನ

ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ವಿದ್ಯಾರ್ಥಿಗಳು ಬುಧವಾರ ಪ್ರದರ್ಶಿಸಿದ ಸಾದತ್ ಹಸನ್ ಮಂಟೋ, ಹೆರಾಲ್ಡ್ ಪಿಂಟರ್ ಮತ್ತು ಸುರೇಂದ್ರ ವರ್ಮಾ ಅವರ ಮೂರು ಕಿರುನಾಟಕಗಳು ಆಧುನಿಕ ಜೀವನದ ಸಂಕೀರ್ಣತೆಯ ಬಗ್ಗೆ ಪ್ರೇಕ್ಷಕರನ್ನು ಯೋಚಿಸುವಂತೆ ಮಾಡಿತು. ಮೂರು ಕಿರುನಾಟಕಗಳಾದ ಉಪರ್ ನೀಚೆ ಔರ್ ದರ್ಮಿಯಾನ್ (ಸಾದತ್ ಹಸನ್ ಮಂಟೋ), ವಿಕ್ಟೋರಿಯಾ ಸ್ಟೇಷನ್ (ಹೆರಾಲ್ಡ್ ಪಿಂಟರ್), ನೀಂದ್ ಕ್ಯುನ್ ರಾತ್ ಭರ್ ನಹಿ ಆತಿ(ಸುರೇಂದ್ರ ವರ್ಮ)ನ್ನು ರಂಗ ನಿರ್ದೇಶಕರಾದ ಅಭಿನವ್ ಗ್ರೋವರ್ […]