ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಎಲ್ಪಿಜಿ ಸಿಲಿಂಡರ್ ದರದಲ್ಲಿ ಮತ್ತೆ ಹೆಚ್ಚಳ
ನವದೆಹಲಿ: ದೆಹಲಿಯಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಮತ್ತೆ 25 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ 14.2 ಕೆಜಿ ಸಿಲಿಂಡರ್ನ ಬೆಲೆ 794 ರೂಪಾಯಿಗೆ ಬಂದು ನಿಂತಿದೆ. ಕಳೆದ ಒಂದು ತಿಂಗಳ ಅಂತರದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಸತತ ಮೂರನೇ ಬಾರಿಕೆ ಏರಿಕೆ ಕಂಡಿದೆ. ಈ ಮೂಲಕ ಡಿಸೆಂಬರ್ 2020 ರಿಂದ ಇಲ್ಲಿಯ ತನಕ ಎಲ್ಪಿಸಿ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ವರೆಗೆ ಏರಿಕೆ ಕಂಡಂತಾಗಿದೆ. ಫೆಬ್ರವರಿ 15 ರಂದು ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ ಕಂಡಿತ್ತು. […]