ಶಿರ್ವ ಗ್ರಾಪಂ ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಭರ್ಜರಿ ಗೆಲುವು

ಶಿರ್ವ: ಶಿರ್ವ ಗ್ರಾಪಂ 12ನೇ ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀನಿವಾಸ ಶೆಣೈ 92 ಮತಗಳ ಅಂತರದಲ್ಲಿ ಭರ್ಜರಿ ಜಯಗಳಿಸಿದ್ದಾರೆ. ಗ್ರಾಪಂ ಅಧ್ಯಕ್ಷರಾಗಿದ್ದ ಗ್ರೆಗೋರಿ ಕೊನ್ರಾಡ್ ಕ್ಯಾಸ್ರಲಿನೋ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮಾ. 29ರಂದು ಉಪಚುನಾವಣೆ ನಡೆದಿತ್ತು. ಶ್ರೀನಿವಾಸ ಶೆಣೈ 421 ಮತಗಳನ್ನು ಪಡೆದಿದ್ದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಲ್ಯಾನ್ಸಿ ಕೋರ್ಡಾ ಅವರು 329 ಮತಗಳನ್ನು ಪಡೆದು ಸೋಲು ಕಂಡರು. 10 ಮತಗಳು ತಿರಸ್ಕೃತಗೊಂಡಿವೆ ಎಂದು ತಿಳಿದುಬಂದಿದೆ. ಬಿಜೆಪಿ ಬೆಂಬಲಿತ […]