ಶಿವಪಾಡಿ ಅತಿರುದ್ರ ಮಹಾಯಾಗದ ಪ್ರಯುಕ್ತ ಸಮರ್ಪಣಾ ದಿವಸ್: ಶಾಸಕ ರಘುಪತಿ ಭಟ್ ಭಾಗಿ
ಮಣಿಪಾಲ: ಶ್ರೀ ಉಮಾಮಹೇಶ್ವರ ದೇವಸ್ಥಾನ ಶಿವಪಾಡಿ, ಸರಳೇಬೆಟ್ಟು ಉಡುಪಿ ಇಲ್ಲಿ ಫೆಬ್ರವರಿ 22 ರಿಂದ ಮಾರ್ಚ್ 5 ರವರೆಗೆ “ಅತಿರುದ್ರ ಮಹಾಯಾಗ” ನಡೆಯಲಿದ್ದು, ಇದರ ಪ್ರಯುಕ್ತ ಭಾನುವಾರದಂದು ನಡೆದ ಸಮರ್ಪಣಾ ದಿವಸ್ ಸಭಾ ಕಾರ್ಯಕ್ರಮದಲ್ಲಿ ಶಾಸಕ, ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ಭಾಗವಹಿಸಿದರು. ಈ ಸಂದರ್ಭ ಅತಿರುದ್ರ ಮಹಾಯಾಗ ಪಾವನ ಕಾರ್ಯಕ್ಕೆ ಉಪಯೋಗಿಸುವ ತುಪ್ಪ, ಎಳ್ಳು, ಭತ್ತ, ಎಳ್ಳೆಣ್ಣೆ, ಗೇರುಬೀಜ, ಅಕ್ಕಿ ಮತ್ತು ಒಣಫಲ ವಸ್ತುಗಳ ಸಮರ್ಪಣೆ ನಡೆಯಿತು.
ಶಿವಪಾಡಿ ಅತಿರುದ್ರಯಾಗ: ಫೆ.12 ಪುಟಾಣಿಗಳಿಗಾಗಿ “ಬಾಲಶಿವ” ಸ್ಪರ್ಧೆ
ಶಿವಪಾಡಿ: ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಪುಟಾಣಿಗಳಿಗಾಗಿ “ಶಿವೋತ್ಸವ ಬಾಲಶಿವ” ಎಂಬ ವೇಷಭೂಷಣ ಸ್ಪರ್ಧೆಯನ್ನು ಫೆಬ್ರವರಿ 12 ಭಾನುವಾರದಂದು ಮಣಿಪಾಲದ ಸರಳೇಬೆಟ್ಟುವಿನ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ. 1 ರಿಂದ 12 ವರ್ಷದ ಮಕ್ಕಳಿಗೆ ಬಾಲಶಿವನ ವೇಷ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ. ಈ ಸ್ಪರ್ಧೆಯು 1 ರಿಂದ 4 ವರ್ಷದ ಪುಟಾಣಿಗಳಿಗೆ “ಸಬ್ ಜೂನಿಯರ್”, 4 ರಿಂದ 8 ವರ್ಷದ ಮಕ್ಕಳಿಗೆ “ಜೂನಿಯರ್” ಮತ್ತು 8 ರಿಂದ 12 ವರ್ಷದ […]
ಫೆ.5 ರಂದು ಶಿವಪಾಡಿಯಲ್ಲಿ ಶಾಲಾ ಮಕ್ಕಳಿಗಾಗಿ ಶಿವ ಚಿತ್ತಾರ
ಮಣಿಪಾಲ: ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ದಿ ಟ್ರಸ್ಟ್ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ‘ಶಿವಚಿತ್ತಾರ’ ವನ್ನು ಫೆ.5 ರಂದು ಬೆಳಿಗ್ಗೆ 9 ರಿಂದ 12 ಗಂಟೆವರೆಗೆ ಶ್ರೀ ಉಮಾಮಹೇಶ್ವರ ದೇವಸ್ಥಾನಲ್ಲಿ ಆಯೋಜಿಸಲಾಗಿದೆ. ಸ್ಪರ್ಧಾ ನಿಯಮ: 1 ಮತ್ತು 5 ನೇ ತರಗತಿಗೆ ಐಛ್ಛಿಕ ವಿಷಯ 7 ಮತ್ತು 8 ನೇ ತರಗತಿಗೆ ಐಛ್ಛಿಕ ವಿಷಯ 9 ಮತ್ತು 10 ನೇ ತರಗತಿಗೆ ತಾಂಡವ ಶಿವ, ಶಾಂತ ಶಿವ ರುದ್ರ ಶಿವ ವಿಷಯ […]
ಶಿವಪಾಡಿ: ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್
ಶಿವಪಾಡಿ: ಶ್ರೀ ಉಮಾಮಹೇಶ್ವರ ದೇವಸ್ಥಾನ ಶಿವಪಾಡಿ ಸರಳೇಬೆಟ್ಟು ಉಡುಪಿ ಇಲ್ಲಿ ನಡೆಯಲಿರುವ “ಅತಿರುದ್ರ ಮಹಾಯಾಗ”ದ ಅಂಗವಾಗಿ ಜ.29 ರಂದು “ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್ ಮತ್ತು ಮೃತ್ತಿಕಾ ಪೂಜೆ” ನಡೆಯಿತು. ಈ ಸಂದರ್ಭ ಅತಿರುದ್ರಯಾಗ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಉಪಸ್ಥಿತರಿದ್ದರು.
ಜ. 29 ರಂದು ಶಿವಪಾಡಿ ದೇವಸ್ಥಾನದಲ್ಲಿ ಅತಿರುದ್ರ ಯಾಗ ಸಂಕಲ್ಪ ದಿವಸ್ ಹಾಗೂ ಮೃತ್ತಿಕಾ ಪೂಜೆ
ಮಣಿಪಾಲ: ಇಲ್ಲಿನ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ.22 ರಿಂದ ಮಾ.5 ರವರೆಗೆ ಅತಿರುದ್ರ ಯಾಗ ನಡೆಯಲಿದ್ದು, ಜ. 29 ರಂದು ಬೆಳಿಗ್ಗೆ ಅತಿರುದ್ರ ಯಾಗ ಸಂಕಲ್ಪ ದಿವಸ್ ಮತ್ತು ಮೃತ್ತಿಕಾ ಪೂಜೆಯನ್ನು ಸಾಮೂಹಿಕವಾಗಿ ಆಚರಿಸಲಾಗುತ್ತದೆ. ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿ, ಶ್ರೀ ವಿಧುಶೇಖರ ಭಾರತೀ ಸ್ವಾಮಿಜಿಯವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ದೇಗುಲದಲ್ಲಿ ಪ್ರಾರ್ಥನೆ, ಯಾಗಶಾಲೆಯ ಭೂಮಿ ಪೂಜೆ, ಪುಣ್ಯತೀರ್ಥ ಕ್ಷೇತ್ರಗಳಿಂದ ತಂದ ಮೃತ್ತಿಕಾ ವಿತರಣೆ, ಸಾಮೂಹಿಕ ದೀಕ್ಷಾ ಸಂಕಲ್ಪ […]