ಶಿವಪಾಡಿ: ಅತಿರುದ್ರ ಮಹಾಯಾಗದಲ್ಲಿ ವಾರಣಾಸಿಯ ಗಂಗಾರತಿಯ ಮಾದರಿ ಶಿವಾರತಿ
ಶಿವಪಾಡಿ: ಇಲ್ಲಿನ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ 22 ರಿಂದ ಮಾರ್ಚ್ 05 ರವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಮತ್ತು ಅತಿರುದ್ರ ಮಹಾಯಾಗ ಸಮಿತಿಯು ಮಂಗಳವಾರದಂದು ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು. ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ಮಾತನಾಡಿ , 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ 12 ದಿನಗಳ ಕಾಲ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಆಗಮಿಸಲಿರುವ 180 ಋತ್ವಿಜರ ವಾಸ್ತವ್ಯಕ್ಕಾಗಿ “ಈಶಾವಾಸ್ಯಾಂ” ವಸತಿ ಗೃಹ ರಚನೆಯಾಗಿದೆ. ಈ […]
ಫೆ. 22 ರಿಂದ ಮಾರ್ಚ್ 05 ರವರೆಗೆ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರಯಾಗ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು
ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಮತ್ತು ಅತಿರುದ್ರ ಮಹಾಯಾಗ ಸಮಿತಿಯ ಜಂಟಿ ಆಶ್ರಯದಲ್ಲಿ ಫೆಬ್ರವರಿ 22 ರಿಂದ ಮಾರ್ಚ್ 05 ರವರೆಗೆ ನಡೆಯಲಿದ್ದು ಶೃಂಗೇರಿ ಶಾರದಾಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಲಿದೆ. ಕಾರ್ಯಕ್ರಮಗಳ ವಿವರ 22 ಬುಧವಾರ ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ 5ರಿಂದ ಧಾರ್ಮಿಕ ಉಪನ್ಯಾಸ : ಕು. ಅಕ್ಷಯಾ ಗೋಖಲೆ, ಉಪನ್ಯಾಸಕರು, ಕಾರ್ಕಳ ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ 7 ರಿಂದ ‘ಯಕ್ಷ ಗಾಯನ ವೈಭವ’ […]
ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಚಿತ್ರನಟ ರಕ್ಷಿತ್ ಶೆಟ್ಟಿ
ಶಿವಪಾಡಿ: ಇಲ್ಲಿನ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ. 22 ರಿಂದ ಮಾರ್ಚ್ 05 ರವರೆಗೆ ನಡೆಯಲಿರುವ ‘ಅತಿರುದ್ರ ಮಹಾಯಾಗ’ ನಡೆಯಲಿದ್ದು, ಕಾರ್ಯಕ್ರಮದ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿವೆ. ಈ ಸಂದರ್ಭ ಚಿತ್ರ ನಟ ರಕ್ಷಿತ್ ಶೆಟ್ಟಿ ಸೋಮವಾರದಂದು ಶಿವಪಾಡಿಯ ಉಮಾಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.
ಶಿವಪಾಡಿ: ಇಂದು ಸಂಜೆ ಯಕ್ಷಗಾನ ಬಯಲಾಟ
ಶಿವಪಾಡಿ: ಶ್ರೀ ಉಮಾಮಹೇಶವರ ದೇವಸ್ಥಾನದಲ್ಲಿ ಶಿವರಾತ್ರಿಯ ಪ್ರಯುಕ್ತ ಪ್ರಾತಃ ಕಾಲದಿಂದ ರಾತ್ರಿ 10.30 ರವರೆಗೆ ವಿಶೇಷ ಸೇವೆಗಳು ನಡೆಯುತ್ತಲಿದ್ದು, ರಾತ್ರಿ 9.30 ರಿಂದ ಪ್ರಾತಃ ಕಾಲದವರೆಗೆ ದೇವಸ್ಥಾನ ಪರಿಸರದಲ್ಲಿ ಅಬ್ಬಗ ದಾರಗ ತುಳು ಯಕ್ಷಗಾನ ಮತ್ತು ಬೇಡರ ಕಣ್ಣಪ್ಪ ಕನ್ನಡ ಯಕ್ಷಗಾನ ಪ್ರಸಂಗ ನಡೆಯಲಿರುವುದು ದೇವಳದ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಬಾಲ ಶಿವರಿಂದ ಶಿವಮಯವಾಯ್ತು ಶಿವಪಾಡಿ
ಮಣಿಪಾಲ: ಭಾನುವಾರದಂದು ಶಿವಪಾಡಿಯ ಶಿವಭೂಮಿಯು ಬಾಲಶಿವರಿಂದ ಕಳೆಗಟ್ಟಿತು. ಅತಿರುದ್ರಯಾಗದ ಪ್ರಯುಕ್ತ ಶಿವಪಾಡಿಯ ಶ್ರೀ ಉಮಾ ಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಸಮರ್ಪಣಾ ದಿನದ ಅಂಗವಾಗಿ ನಡೆದ ಬಾಲಶಿವ ವೇಷಭೂಷಣ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ 150 ಕ್ಕೂ ಹೆಚ್ಚಿನ ಬಾಲಶಿವ ವೇಷಧಾರಿ ಮಕ್ಕಳು ಭಾಗವಹಿಸಿದರು. ಶಿವಪಾಡಿಯೆಲ್ಲಾ ಶಿವಮಯವಾಗಿ ಭಕ್ತರು ಪುಳಕಿತಗೊಂಡರು.