ಸದ್ದಿಲ್ಲದೆ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ ಶಿವಾಜಿ ಸುರತ್ಕಲ್ 2: ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ

ಶಿವಾಜಿ ಸುರತ್ಕಲ್ 2: ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ, ರಮೇಶ್ ಅರವಿಂದ್ ನಟನೆಯ ಆಕಾಶ್ ಶ್ರೀವತ್ಸ ನಿರ್ದೇಶಿಸಿ ಸಂಕಲಿಸಿರುವ ಚಿತ್ರ ಸದ್ದಿಲ್ಲದೆ ಬಿಡುಗಡೆಯಾಗಿದ್ದರೂ ಸದ್ದು ಮಾಡುತ್ತಿದೆ. ಶಿವಾಜಿ ಸುರತ್ಕಲ್ ಭಾಗ 1-ರಣಗಿರಿ ರಹಸ್ಯ ಕೂಡಾ ಚಿತ್ರರಸಿಕರಿಗೆ ಮೋಡಿ ಮಾಡಿತ್ತು. ಅಬ್ಬರದ ಪ್ರಚಾರ, ಗಿಮಿಕ್ ಗಳಿಲ್ಲದೆ ಕೇವಲ ಕಥಾ ಹಂದರದಿಂದಲೇ ಶಿವಾಜಿ ಜನರ ಮನಗೆಲ್ಲುತ್ತಿದ್ದಾನೆ. ಇಬ್ಬರು ಹುಡುಗಿಯರು ಕ್ರೂರವಾಗಿ ಸಾವನ್ನಪ್ಪಿದ್ದು ಶಿವಾಜಿ ಜೊತೆಯಲ್ಲಿ ಆತನ ನಂಬಿಕಸ್ಥ ಸಹಾಯಕ ಗೋವಿಂದು ಈ ಸಾವಿನ ತನಿಖೆಯನ್ನು ಕೈಗೆತ್ತಿಕೊಂಡಿರುವ ಕಥಾ ಹಂದರವಿದೆ. […]