ಕಾಲೇಜು ಕ್ಯಾಂಪಸ್ ನಲ್ಲಿ ಓಡಾಡುತ್ತಿದ್ದ ನಾಯಿಯನ್ನು ಹೊಡೆದು ಸಾಯಿಸಿದ ವಾರ್ಡನ್ ಗಳ ಮೇಲೆ ಕ್ರಮ

ಕಾಪು: ಕಾಲೇಜು ಕ್ಯಾಂಪಸ್ ನಲ್ಲಿ ಓಡಾಡುತ್ತಿದ್ದ  ನಾಯಿಯನ್ನು ಗೋಣಿಚೀಲದಲ್ಲಿ ಹಾಕಿ ಬಡಿದು ಕೊಲೆ ಮಾಡಿರುವ ಅಮಾನವೀಯ ಘಟನೆ ತಾಲೂಕಿನ ಶಿರ್ವ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬಂಟಕಲ್ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಕ್ಯಾಂಪಸ್ ನಲ್ಲಿ ನಾಯಿ ಓಡಾಡುತ್ತಿದ್ದು ಇದನ್ನು ಕಂಡ ವಿದ್ಯಾರ್ಥಿನಿಯೊಬ್ಬಳು ಹೆದರಿಕೊಂಡು ಈ ಬಗ್ಗೆ ದೂರು ನೀಡಿರುವುದಕ್ಕೆ ಸಂಬಂಧಿಸಿದಂತೆ ಕಾಲೇಜಿನ ವಾರ್ಡನ್ ಗಳು ಈ ನಾಯಿಯನ್ನು ಕೊಂದು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಈಗ […]

ಶಿರ್ವದಲ್ಲೊಬ್ಬ ತದ್ರೂಪಿ ರಿಷಭ್ ಶೆಟ್ಟಿ: ಕಾಂತಾರದ ಶಿವ ಪಾತ್ರಧಾರಿ ರಿಷಭ್ ರೀತಿ ಕಾಣುವ ವ್ಯಕ್ತಿಗೆ ಬೇಸ್ತು ಬಿದ್ದ ಜನ!

ಶಿರ್ವ: ಉಡುಪಿಯ ಶಿರ್ವದ ಪಂಜಿಮಾರಿನಲ್ಲೊಬ್ಬ ಹೆಚ್ಚುಕಡಿಮೆ ಕಾಂತಾರದ ಶಿವ ಪಾತ್ರಧಾರಿಯಾದ ರಿಷಭ್ ಶೆಟ್ಟರಂತೆಯೆ ಕಾಣುವ ವ್ಯಕ್ತಿಯೊಬ್ಬರಿದ್ದಾರೆ. ದೂರದಿಂದ ನೋಡಿದಾಗ ರಿಷಭ್ ಶೆಟ್ರೇ ಬಂದರೇನೋ ಅನ್ನಿಸಿಬಿಡುತ್ತದೆ. ಆದರೆ ಹತ್ತಿರಹೋಗಿ ನೋಡಿದಾಗ ಇದು ರಿಷಭ್ ಶೆಟ್ರಲ್ಲ ಬದಲಿಗೆ ಅವರ ತದ್ರೂಪಿ ಎನ್ನುವುದು ಗೊತ್ತಾಗಿ ಜನ ಬೇಸ್ತು ಬೀಳುತ್ತಿದ್ದಾರೆ! ಶಿರ್ವದ ಪಂಜಿಮಾರಿನ ನಿವಾಸಿ ಪ್ರದೀಪ್ ಆಚಾರ್ಯ ಇವರೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿರುವ ಜ್ಯೂನಿಯರ್ ರಿಷಭ್ ಶೆಟ್ಟಿ. ಪ್ರಸ್ತುತ ಇವರು ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಕಾಂತಾರದ ಶಿವ ಪಾತ್ರದಲ್ಲಿ […]

ಶಿರ್ವ: ಬೇಲಿಯಲ್ಲಿ ಸಿಲುಕಿಕೊಂಡಿದ್ದ ಚಿರತೆ ರಕ್ಷಣೆ

ಶಿರ್ವ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡಪಾಡಿ ಪದವು ಬಳಿಯ ಅಶ್ವತ್ಥಕಟ್ಟೆ ಸಮೀಪ ಶಿರ್ವ-ಪಳ್ಳಿ ಮುಖ್ಯರಸ್ತೆಯ ಕಾಡಿನಲ್ಲಿ ತಂತಿ ಬೇಲಿಗೆ ಚಿರತೆಯೊಂದು ಸಿಲುಕಿ ಒದ್ದಾಡುತ್ತಿದ್ದು, ಇದನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದು ಇಲಾಖೆಯ ಅಧಿಕಾರಿಗಳ ತಂಡವು ಬುಧವಾರದಂದು ಚಿರತೆಯನ್ನು ರಕ್ಷಿಸಿದೆ. ತಂಡದಲ್ಲಿ ಪಡುಬಿದ್ರೆ ಉಪ ವಲಯಾರಣ್ಯಾಧಿಕಾರಿ ಗುರುರಾಜ್ ಕೆ., ಅರಣ್ಯ ರಕ್ಷಕ ಚರಣ್‌ರಾಜ್ ಜೋಗಿ, ಮಂಜುನಾಥ್ ನಾಯಕ್, ಕೇಶವ ಪೂಜಾರಿ, ವಾಹನ ಚಾಲಕ ಜೋಯ್ ಮುಂತಾದವರು ಇದ್ದರು. ಚಿರತೆಗೆ ಅರಿವಳಿಕೆ ಮದ್ದು ನೀಡಿ ರಕ್ಷಿಸಲಾಯಿತು.

ತಂಬಾಕು ನಿಯಂತ್ರಣ ತನಿಖಾ ದಳದಿಂದ ಶಿರ್ವ ವ್ಯಾಪ್ತಿಯಲ್ಲಿ ದಾಳಿ: 18 ಪ್ರಕರಣ ದಾಖಲು

ಉಡುಪಿ : ಜಿಲ್ಲೆಯಲ್ಲಿ ಕೋಟ್ಪಾ ಕಾಯಿದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಉಡುಪಿ ತಾಲೂಕು ತಂಬಾಕು ನಿಯಂತ್ರಣ ತನಿಖಾ ದಳದ ವತಿಯಿಂದ ಗುರುವಾರ ಶಿರ್ವ ವ್ಯಾಪ್ತಿ ಪ್ರದೇಶಗಳ ತಂಬಾಕು ಮಾರಾಟದ ಅಂಗಡಿ, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ, ಸೆಕ್ಷನ್ 4, 6(ಎ) ಮತ್ತು 6(ಬಿ) ಅಡಿಯಲ್ಲಿ 18 ಪ್ರಕರಣಗಳನ್ನು ದಾಖಲಿಸಿ, 3250 ರೂ. ದಂಡ ವಸೂಲಿ ಮಾಡಲಾಯಿತು. ಈ ಸಂದರ್ಭದಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ […]

ಶಿರ್ವ: ಫ್ರೆಂಡ್ಸ್ ಗ್ರೂಪ್ ಕಳತ್ತೂರು ವತಿಯಿಂದ ಆಟಿಡೊಂಜಿ ದಿನಾಚರಣೆ

ಶಿರ್ವ: ಆಟಿಯ ತಿಂಗಳ ಪ್ರಯುಕ್ತ ಜುಲೈ 31 ರಂದು ತುಳುನಾಡಿನ ವಿಶಿಷ್ಟ ಆಚರಣೆಗಳುಳ್ಳ ಆಂಟಿಡೊಂಜಿ ದಿನ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀಮತಿ ಬಬಿತ ಅರಸ್ ರವರು ಆಟಿ ದಿನದ ವಿಶೇಷತೆ, ಹಿಂದಿನ ಆಟಿ ತಿಂಗಳ ಸಂಕಷ್ಟದ ದಿನಗಳ ಬಗ್ಗೆ ನೆನೆಪಿಸಿಕೊಂಡರು. ಫ್ರೆಂಡ್ಸ್ ಗ್ರೂಪ್ ವತಿಯಿಂದ ಕಳತ್ತೂರು ರಂಗನಾಥ ಶೆಟ್ಟಿ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಶೇಖರ ಶೆಟ್ಟಿ ಕಳತ್ತೂರು, ವಾಸು ಶೆಟ್ಟಿ ಕಳತ್ತೂರು ಉಪಸ್ಥಿತರಿದ್ದರು. ಶ್ರೀಮತಿ ಸುಮನ ದೇವಾಡಿಗ ಸ್ವಾಗತಿಸಿದರು, […]