ನವೀಕರಣಗೊಂಡಿದೆ ಶಿರೂರು ಮೂಲ ಮಠ: ರಾಮನವಮಿ ಉತ್ಸವ ಸಂಭ್ರಮ

ಹಿರಿಯಡಕ: ಉಡುಪಿಯ ಅಷ್ಟಮಠಗಳಲ್ಲಿ ಹೆಸರಾದ ಶಿರೂರು ಮಠದ ಮೂಲ ಮಠದಲ್ಲಿ ರಾಮನವಮಿ ಮಹೋತ್ಸವವು ಶಿರೂರು ಮಠದ ದ್ವಂದ್ವಮಠವಾದ ಸೋದೆ ವಾದಿರಾಜ ಮಠಾಧೀಶರಾದ ವಿಶ್ವವಲ್ಲಭತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸಂಭ್ರಮದಿಂದ ನಡೆಯಲಿದೆ. ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಏ.12 ರಂದು ಬೆಳಿಗ್ಗೆ ಗಣಹೋಮ, ಸೋದೆ ಹಾಗೂ ಶಿರೂರ ಮಠ ಸಂಸ್ಥಾನಗಳ ದೇವರ ಪೂಜೆ, ವೇದವ್ಯಾಸ ದೇವರ ಪೂಜೆ, ಪ್ರಾಣದೇವರ ಪೂಜೆ, ವಾದಿರಾಜರ ಪೂಜೆ ನಡೆಯಲಿದೆ. ಸಂಜೆ ಕಟ್ಟೆ ಪೂಜೆ, ಶ್ರೀ ಪ್ರಾಣದೇವರ ರಂಗಪೂಜೆ, ಭೂತರಾಜರ ಪೂಜೆ ನಡೆಯಲಿದೆ. 13 […]