ಶಿರೂರು: ಮೀನುಗಾರಿಕೆ ವೇಳೆ ಕಾಲಿಗೆ ಬಲೆ ಸಿಲುಕಿ ನೀರಿಗೆ ಬಿದ್ದು ಯುವ ಮೀನುಗಾರ ಸಾವು

ಬೈಂದೂರು: ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಕಾಲಿಗೆ ಬಲೆ ಸಿಲುಕಿದ ಪರಿಣಾಮ ಮೀನುಗಾರನೋರ್ವ ಸಮುದ್ರದ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಶಿರೂರು ಅಳ್ವೆಗದ್ದೆ ನಿವಾಸಿ 25 ವರ್ಷದ ನಾಗರಾಜ ಮೊಗೇರ್ ಮೃತ ಮೀನುಗಾರ. ಕ್ರಿಯಾಶೀಲ ಯುವಕನಾಗಿದ್ದ ಈತ ಎರಡು ದಿನದ ಹಿಂದಷ್ಟೆ ಬೋಟಿಗೆ ತೆರಳಿದ್ದ ಎನ್ನಲಾಗಿದೆ. ಮೃತದೇಹವನ್ನು ಬೋಟ್ ಮೂಲಕ ಭಟ್ಕಳ ಬಂದರಿಗೆ ತಂದು ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಿಸುದಾರರಿಗೆ ನೀಡಲಾಗಿದೆ.