ಶಿರೂರು ಮಠದ ಯಾವುದೇ ಸೊತ್ತು, ಆಸ್ತಿ ಮಾರಾಟ ಮಾಡಿಲ್ಲ: ಸೋದೆ ಶ್ರೀಪಾದರು
ಉಡುಪಿ: ಶಿರೂರು ಮಠದ ಯಾವುದೇ ಸೊತ್ತು, ಆಸ್ತಿಯನ್ನು ಮಾರಾಟ ಮಾಡಿಲ್ಲ ಅಥವಾ ಪರಭಾರೆ ಮಾಡಿಲ್ಲ. ಮಠಕ್ಕೆ ಬರುವ ಆದಾಯದಿಂದಲೇ ಎಲ್ಲ ಖರ್ಚುವೆಚ್ಚಗಳನ್ನು ಸರಿದೂಗಿಸಲಾಗುತ್ತಿದೆ. ಇದರಲ್ಲಿ ಪೂರ್ತಿ ಪಾರದರ್ಶಕವಿದೆ. ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡಿಲ್ಲ ಎಂದು ಸೋದೆ ಮಠದ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು. ಉಡುಪಿ ಶಿರೂರು ಮಠದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠಕ್ಕೆ ಸಂಬಂಧಿಸಿದ ಈ ಎಲ್ಲ ಕಾರ್ಯಗಳಿಗೆ ತಗುಲುವ ಖರ್ಚುವೆಚ್ಚಗಳನ್ನು ಶಿರೂರು ಮಠದ ಮಣಿಪಾಲದ ಕಟ್ಟಡ ಹಾಗೂ ಮಠದ ಸಮೀಪ ಇರುವ ವಾಣಿಜ್ಯ ಅಂಗಡಿಗಳಿಂದ […]