ಶ್ರೀ ಶಿರೂರು ಶ್ರೀಗಳ ಎಂದೂ ಮುಗಿಯದ ನೆನಪು: ಅಕ್ಷೋಭ್ಯ ಆಚಾರ್ಯರು ತೆರೆದ ಶ್ರೀಗಳ ನೆನಪಿನ ಸಂಪುಟ
ಒಮ್ಮೆ ನನ್ನ ಅಜ್ಜಿ ಕುಸುಮಕ್ಕನ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಮಠದಲ್ಲೇ ಉಳಿದೆವು. ರಾತ್ರಿ ಸುಮಾರು 1 ಗಂಟೆಯ ಹೊತ್ತಿಗೆ ಯಾರೋ ಮಠದವರೊಬ್ಬರು ಬೊಬ್ಬಿಡುತ್ತಾ ಬಂದು ನಮ್ಮ ಕೋಣೆಯ ಬಾಗಿಲನ್ನು ಜೋರಾಗಿ ತಟ್ಟಿದರು. ಕೃಷ್ಣಮಠದ ಪಾಯದ ಕೋಣೆಗೆ ಬೆಂಕಿ ಹತ್ತಿಕೊಂಡಿದೆ ಎಲ್ಲಾ ಬನ್ನಿ ಎಂದು ಕೂಗುತ್ತಾ ಮಠದ ಸಿಬ್ಬಂದಿ ಎಲ್ಲರಿಗೂ ವಿಷಯ ತಿಳಿಸುತ್ತಿದ್ದ. ತಕ್ಷಣ ನನ್ನ ಅಪ್ಪ ಲಾತವ್ಯಾಚಾರ್ ಮಠದ ಕಡೆಗೆ ಓಡಿದರು. ನಾವೂ ಕೂಡಾ ಅಮ್ಮನ ಜೊತೆ ಆ ಸ್ಥಳಕ್ಕೆ ಹೋದೆವು. ಆದರೆ ನಾವು ಬರುವಷ್ಟರಲ್ಲಿ ಶಿರೂರು […]