ಶಿರೂರು ಶ್ರೀಗಳ ಸಾವಿನ ಪ್ರಕರಣ ಜೀವಂತವಾಗಿದೆ: ರವಿಕಿರಣ್ ಮುರ್ಡೇಶ್ವರ

ಉಡುಪಿ: ಶಿರೂರು ಶ್ರೀಗಳ ಸಾವಿನ ಪ್ರಕರಣ ಹಳ್ಳಹಿಡಿದಿಲ್ಲ. ಇನ್ನೂ ಜೀವಂತವಾಗಿದೆ. ಆದರೆ ಪ್ರಕರಣವನ್ನು ಮುಂದುವರಿಸುವವರು ಯಾರು ಎಂಬುವುದೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ ಎಂದು ಹಿರಿಯ ವಕೀಲ ರವಿಕಿರಣ್‌ ಮುರ್ಡೇಶ್ವರ ಹೇಳಿದರು. ಶಿರೂರು ಶ್ರೀಗಳ ವರ್ಷದ ಸಂಸ್ಮರಣ ಕಾರ್ಯಕ್ರಮದ ‌ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು, ಶ್ರೀಗಳ ಪೂರ್ವಾಶ್ರಮದ ರಕ್ತ ಸಂಬಂಧಿಗಳು ದೂರು ನೀಡಿದರೆ ಮಾತ್ರ ಪ್ರಕರಣವನ್ನು ಮುಂದುವರಿಸಬಹುದು. ಆದರೆ ಅಭಿಮಾನಿ ಬಳಗದವರು ನ್ಯಾಯಾಲಯದಲ್ಲಿ ದಾವೆ ಹೂಡಲು ಸಾಧ್ಯವಿಲ್ಲ. ಕೊಲೆ ಪ್ರಕರಣ, ಸಂಶಯದ ಸಾವಿಗೆ ಕಾಲಮಿತಿ ಇಲ್ಲ. ಹಾಗಾಗಿ […]

ಜುಲೈ 19ಕ್ಕೆ ಶಿರೂರು ಸ್ವಾಮೀಜಿ ಸಂಸ್ಮರಣೆ.

ಉಡುಪಿ: ಶಿರೂರು ಮಠದ ಲಕ್ಷ್ಮೀವರತೀರ್ಥ ಶ್ರೀಪಾದರು ವೃಂದಾವನಸ್ಥರಾಗಿ ಒಂದು ವರುಷ ಕಳೆದ ಹಿನ್ನಲೆಯಲ್ಲಿ ಜುಲೈ 19 ರಂದು ಉಪ್ಪೂರಿನಲ್ಲಿರುವ ಸ್ಪಂದನ ವಿಶೇಷ ಮಕ್ಕಳ ಆಶ್ರಮದಲ್ಲಿ ಶಿರೂರು ಶ್ರೀಗಳ ಅಭಿಮಾನಿಗಳು ಶಿರೂರು ಸ್ವಾಮಿಗಳ ಸಂಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಂದು ಬೆಳ್ಳಿಗ್ಗೆ 11.30 ಕ್ಕೆ ಭಜನಾ ತಂಡದವರಿಂದ ಭಜನೆ ಕಾರ್ಯಕ್ರಮ‌ ನಡೆಯಲಿದ್ದು,  ಕಾರ್ಯಕ್ರಮದಲ್ಲಿ ಕೇಮಾರು ಶ್ರೀಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿರುವರು‌. ಇದೇ ಸಂದರ್ಭದಲ್ಲಿ ಸ್ಪಂದನ ಶಾಲೆಯ ಮಕ್ಕಳಿಗೆ ಶಿರೂರು ಸ್ವಾಮೀಜಿಗಳ ಹೆಸರಿನಲ್ಲಿ ಅನ್ನದಾನ ಕೂಡ ನಡೆಯಲಿದೆ. ಶಿರೂರು ಶ್ರೀಗಳು […]