ಲಸಿಕೆ ಕೊಡಿಸುವುದಾಗಿ ರಾತ್ರೋರಾತ್ರಿ 85 ಮಹಿಳೆಯರ ಸಾಗಾಟ; ಪ್ರಕರಣ ದಾಖಲು
ಮಂಗಳೂರು: ಕೊರೊನಾ ಲಸಿಕೆ ಕೊಡಿಸುವುದಾಗಿ ಹೇಳಿ ರಾತ್ರೋರಾತ್ರಿ 85 ಮಹಿಳೆಯರನ್ನು ಸಾಗಾಟ ಮಾಡಿರುವ ಘಟನೆ ಮೂಡಬಿದಿರೆ ತಾಲೂಕಿನ ಕಾರ್ನಾಡು ಗ್ರಾಮದಲ್ಲಿ ನಡೆದಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯ ಮ್ಯಾನೇಜರ್ ಒಬ್ಬರು ಮಂಗಳವಾರ ರಾತ್ರಿ ಕೊರೊನಾ ಲಸಿಕೆ ನೀಡುವುದಾಗಿ 85 ಮಹಿಳೆಯರನ್ನು, ತಮ್ಮ ಸಂಸ್ಥೆಯ ಬಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಗ್ರಾಮಸ್ಥರು ತಡರಾತ್ರಿ ಯಾವ ಲಸಿಕೆ ಕೊಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆ ಸಂಬಂಧ ಬಸ್ ಚಾಲಕ ಪ್ರವೀಣ್, ಆಸ್ಪತ್ರೆ ಮ್ಯಾನೇಜರ್ ನವಾಜ್ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ […]