ಕಟೀಲು ದೇವಳಕ್ಕೆ ಭೇಟಿ ನೀಡಿದ ಚಿತ್ರನಟಿ ಶಿಲ್ಪಾ ಶೆಟ್ಟಿ ಕುಟುಂಬ

ಕಿನ್ನಿಗೋಳಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಪತಿ ರಾಜ್ ಕುಂದ್ರಾ, ಮಕ್ಕಳು, ಸಹೋದರಿ ಶಮಿತಾ ಶೆಟ್ಟಿ ಮತ್ತು ತಾಯಿಯೊಂದಿಗೆ ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಹೆಣ್ಣು ಮಗು ಜನಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಲು ಶಿಲ್ಪಾ ದೇವರಿಗೆ ಸೀರೆಯನ್ನು ಅರ್ಪಿಸಿದರು. ಅನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ ಪ್ರಸಾದ ವಿತರಿಸಿದರು. ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀ ಹರಿ ಆಸ್ರಣ್ಣ, ನ್ಯಾಯವಾದಿ ರವಿ ಪೂಜಾರಿ ಉಪಸ್ಥಿತರಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಿಂಗಪ್ಪ ಸೇರಿಗಾರ್ ಅವರಿಂದ ನಾಗಸ್ವರ […]

ಕಾಂತಾರ ಕಂಡು ಮೆಚ್ಚಿದ ಕರಾವಳಿ ಬೆಡಗಿಯರು: ಅನುಷ್ಕಾ, ಶಿಲ್ಪಾ ಶೆಟ್ಟಿ ಯಿಂದ ರಿಷಭ್ ಗುಣಗಾನ

ಕರಾವಳಿಯ ಬೆಡಗಿಯರಾದ ಅನುಷ್ಕಾ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಮತ್ತು ಸಂಪೂರ್ಣ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಮೂಲತಃ ಪುತ್ತೂರಿನ ಬೆಳ್ಳಿಪಾಡಿಯವರಾದ ಅನುಷ್ಕಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ಚಿತ್ರವನ್ನು ಸಂಪೂರ್ಣವಾಗಿ ಮೆಚ್ಚಿಕೊಂಡಿದ್ದೇನೆ. ರಿಷಭ್ ಮತ್ತು ಸಮಸ್ತ ಕಾಂತಾರ ತಂಡಕ್ಕೆ ಶುಭಾಶಯ ಎಂದಿದ್ದಾರೆ. ನಿಡ್ಡೋಡಿಯ ಮುದಲಾಡಿಯವರಾದ ಶಿಲ್ಪಾ ಶೆಟ್ಟಿ ಕೂಡಾ ಕಾಂತಾರ ಸಿನಿಮಾ ವೀಕ್ಷಿಸಿ, ಎಂತಹ ನಿರೂಪಣೆ, ಭಾವನೆ, ಕಂಪನ ಮತ್ತು ಜಗತ್ತು. ಕ್ಲೈಮ್ಯಾಕ್ಸ್ ಸಮಯದಲ್ಲಿ ಮೈರೋಮಾಂಚನಗೊಂಡಿತ್ತು. ಸಿನಿಮಾದ ಶಕ್ತಿಯು […]