ಕ್ರೀಡಾಲೋಕದ ನಕ್ಷತ್ರ, ಯುವ ಕ್ರೀಡಾಳುಗಳ ಅಪ್ರತಿಮ ಗುರು: ಉಡುಪಿಯ ಶಾಲಿನಿ ಶೆಟ್ಟಿ ಯಶೋಗಾಥೆ ಇದು!

ನಮ್ಮ ದೇಶದಲ್ಲಿ ಕ್ರಿಕೆಟ್ ಮತ್ತು ಇನ್ನಿತರ ಕ್ರೀಡೆಗಳಿಗೆ ಇರುವ ತರತಮ ವ್ಯವಸ್ಥೆಯಿಂದಾಗಿ ಸಾವಿರಾರು ಕ್ರೀಡಾಳುಗಳ ಪ್ರತಿಭೆಗಳು ಬೆಳಕಿಗೆ ಬಾರದೇ ಕರುಟಿ, ಮುರುಟಿ, ಮುದುರಿ ಹೋಗುತ್ತಿರುವುದಂತು ಸತ್ಯ. ಆದರೂ ಕೆಲವೊಮ್ಮೆ ಕೆಲವು ಕ್ರೀಡಾಪಟುಗಳು ತಮ್ಮ ಅದ್ವಿತೀಯ ಸಾಧನೆ, ಪ್ರತಿಭೆ, ಪ್ರಬಲವಾದ ಇಚ್ಛಾಶಕ್ತಿಯಿಂದ ಕ್ರೀಡಾಂಬರದಲ್ಲಿ ನಕ್ಷತ್ರಗಳಂತೆ ಮಿಂಚಿ ಪ್ರಜ್ವಲಿಸುತ್ತಾರೆ. ಇನ್ನೂ ಕೆಲವರು ವನಸುಮಗಳಂತೆ ಜಗದ ಪೊಗಳಿಕೆಗೆ ಬಾಯಿ ಬಿಡದೆ ಎಲೆಯ ಮರೆಯ ಪಿಂತಿರ್ದು ತಾನಾಯಿತು ತನ್ನ ಸಾಧನೆಯಾಯ್ತು ಎಂದು ಸದ್ದಿಲ್ಲದೆ ತಮ್ಮಷ್ಟಕ್ಕೆ ತಾವೇ ಸಾಧಿಸಿಕೊಂಡು ಮುಂದುವರಿಯುತ್ತಾರೆ. ಹೀಗೆ ಪ್ರಚಾರಕ್ಕೆ ಹಾತೊರೆಯದೆ […]