ಹಿರಿಯ ಉದ್ಯಮಿ, ಸಮಾಜ ಸೇವಕ ಕೆ. ಸೇಸಪ್ಪ ಕೋಟ್ಯಾನ್ ವಿಧಿವಶ
ಬಂಟ್ವಾಳ: ಹಿರಿಯ ಉದ್ಯಮಿ, ಸಮಾಜ ಸೇವಕ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ 2022-23 ರ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಪಚ್ಚಿನಡ್ಕ ಕೆ.ಸೇಸಪ್ಪ ಕೋಟ್ಯಾನ್ (75) ಜನವರಿ 26ರಂದು ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಪತ್ನಿ ಚಂದ್ರಾವತಿ, ಪುತ್ರ ಭುವನೇಶ್ ಪಚ್ಚಿನಡ್ಕ, ಹಾಗು ನಾಲ್ಕು ಹೆಣ್ಣುಮಕ್ಕಳ ಸಹಿತ ಬಂಧುಮಿತ್ರರನ್ನು ಅಗಲಿದ್ದಾರೆ. . ಶುಭ ಬೀಡಿಗಳು ಹೆಸರಿನಲ್ಲಿ ಬೀಡಿ ಉದ್ಯಮವನ್ನು ಆರಂಭಿಸಿ ಸಹಸ್ರಾರು ಮಂದಿಗೆ ಉದ್ಯೋಗದಾತರಾದ ಅವರು, ರಿಕ್ಷಾ, ಸ್ಕೂಟರ್ ಮೂಲಕ ಮಾರುಕಟ್ಟೆ […]