ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಇ.ಪಿ ಕುರಿತು ಉಪನ್ಯಾಸ ಕಾರ್ಯಕ್ರಮ
ಶಾರದಾ ರೆಸಿಡೆನ್ಶಿಯಲ್ ಶಾಲೆ ಹಾಗೂ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಜುಲೈ 7 ರಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಡಯಟ್ ಪ್ರಾಂಶುಪಾಲ ಹಾಗೂ ಬಿಇಒ(ಪ್ರಭಾರ) ಡಾ. ಅಶೋಕ್ ಕಾಮತ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಹೊಸ ಶಿಕ್ಷಣ ನೀತಿಯ ಗುರಿ, ಅನುಕೂಲಗಳು, ಶಾಲಾ ಶಿಕ್ಷಣದಲ್ಲಿ ಇದುವರೆಗಿದ್ದ 10+2 ಮಾದರಿಯನ್ನು ಮಾರ್ಪಡಿಸಿ,3 ರಿಂದ 18 ವಯೋಮಾನದವರೆಗೆ 5+3+3+4 ಮಾದರಿಯಲ್ಲಿ ಬೋಧನಾ ಕ್ರಮ ಹಾಗೂ ಶಿಕ್ಷಣ ಮರು ವಿನ್ಯಾಸ ಮಾಡಿರುವುದರ ಬಗ್ಗೆ ಸಮಗ್ರ ಮಾಹಿತಿ […]