ಕಡಿಯಾಳಿ: ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶಮೀ ವೃಕ್ಷ ಪೂಜೆ
ಶರನ್ನವರಾತ್ರಿ ಕಳೆದು ಮರುದಿನ ವಿಜಯದಶಮೀ ಪರ್ವದಿನದ ಮುಸ್ಸಂಜೆಯಲ್ಲಿ ಊರಿನ ಈಶಾನ್ಯ ಭಾಗದಲ್ಲಿರುವ ( ಅಥವಾ ನದೀ ತೀರ) ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಅದರ ಎಲೆಯನ್ನು ಪ್ರಸಾದವಾಗಿ ಸ್ವೀಕರಿಸಿದರೆ ಅಕ್ಷಯ ಸಂಪತ್ತು ಮತ್ತು ವಿಜಯ, ಯಶಸ್ಸು ಪ್ರಾಪ್ತಿ ಎನ್ನುತ್ತವೆ ಶಾಸ್ತ್ರ ಪುರಾಣಗಳು. ಮಹಾಭಾರತದಲ್ಲಿ ಪಾಂಡವರ ವಿಜಯಕ್ಕೂ, ರಾಮಾಯಣದಲ್ಲಿ ಶ್ರೀರಾಮನ ವಿಜಯಕ್ಕೂ ಇದೇ ಕಾರಣ ಎನ್ನುತ್ತಾರೆ. ಈ ಹಿಂದೆ ಊರಿನಲ್ಲಿ ನೆಲ್ಲಿ , ಅರಳಿ , ಅಶ್ವತ್ಥ , ಶಮೀ, ಔದುಂಬರ ಮೊದಲಾದ ವೃಕ್ಷಗಳನ್ನು ಬೆಳೆಸಿ ರಕ್ಷಿಸುವ ಪದ್ಧತಿ […]