ಅನಂತಪದ್ಮನಾಭ ದೇವಸ್ಥಾನದಲ್ಲಿ ಭಾಗವತ ಸಪ್ತಾಹ ಕಾರ್ಯಕ್ರಮ
ಪಣಿಯಾಡಿ: ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸೇವಾ ರೂಪವಾಗಿ ನಡೆಯುತ್ತಿರುವ ಶಾಕಾಲ ಋಕ್ ಸಂಹಿತಾ ಯಾಗ ಹಾಗೂ ಭಾಗವತ ಸಪ್ತಾಹ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಭಾಗವಹಿಸಿದರು. ಭಾಗವತ ಪುರಾಣವು ಎಲ್ಲಾ ಪುರಾಣಗಳ ರಾಜ ಮತ್ತು ಸಾರವಾಗಿದೆ. ಪುರಾಣ ಎಂದರೆ ಪುರಾತನ ಕಾಲದಲ್ಲಿ ನಡೆದ ಹಳೆಯ ವಿಷಯಗಳನ್ನು ಹೇಳುವುದು ಎಂದರ್ಥ. ಇದು ಅಪ್ರಸ್ತುತ ಎಂದು ಜನರು ತಿಳಿದಿರುತ್ತಾರೆ. ಆದರೆ ಪುರಾಣವು ಅಂದೂ ಇಂದೂ ಹೊಸತು ಮತ್ತು ಸಾರ್ವಕಾಲಿಕವಾಗಿ ಪ್ರಸ್ತುತವಾಗಿರುವ ವಿಷಯವಾಗಿದೆ. ಭಗವಂತನ ಅವತಾರಗಳ ವರ್ಣನೆಯನ್ನು ತಿಳಿಸುವ […]