ಯಕ್ಷರಂಗದಲ್ಲಿ ಅರಳುತ್ತಾರೆ, ವಿದ್ಯಾರ್ಥಿಗಳನ್ನೂ ಅರಳಿಸ್ತಾರೆ: ಬನ್ನಂಜೆ ಸಂಜೀವ ಸುವರ್ಣರ ಶಿಷ್ಯ ಶೈಲೇಶ್ ತೀರ್ಥಹಳ್ಳಿ ಕತೆಯಿದು!
ಇದು ಉಡುಪಿ XPRESS “ಬಣ್ಣದ ಕನಸುಗಾರರು” ಸರಣಿಯ 8ನೇ ಕಂತು. ಈ ಸರಣಿಯಲ್ಲಿ ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ಈ ಸಂಚಿಕೆಯಲ್ಲಿ ಯಕ್ಷರಂಗದಲ್ಲಿ ತಾವೂ ಅರಳುತ್ತ, ವಿದ್ಯಾರ್ಥಿಗಳನ್ನೂ ಅರಳಿಸುವ ಬನ್ನಂಜೆ ಸಂಜೀವ ಸುವರ್ಣರ ಶಿಷ್ಯ ಶೈಲೇಶ್ ತೀರ್ಥಹಳ್ಳಿ ಅವರ ಕತೆ. ಯಕ್ಷಗಾನ ನೋಡುವ, ಆರಾಧಿಸುವ, ಆನಂದಿಸುವ, ಪ್ರೀತಿಸುವ ಕಲಾಭಿಮಾನಿಗಳಿಗೆ ನಮ್ಮಲ್ಲೇನೂ […]