ವಯನಾಡಿನಲ್ಲಿರುವ ರಾಹುಲ್ ಗಾಂಧಿ ಕಚೇರಿ ಧ್ವಂಸ: ಎಸ್‌ಎಫ್‌ಐ ಮೇಲೆ ಆರೋಪ ಹೊರಿಸಿದ ಯುವ ಕಾಂಗ್ರೆಸ್
ಕೇರಳ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವಯನಾಡ್‌ನಲ್ಲಿರುವ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ಕೆಲವು ಕಿಡಿಗೇಡಿಗಳು ಕಚೇರಿಯೊಳಗೆ ನುಗ್ಗಿ ಕಚೇರಿಯನ್ನು ಧ್ವಂಸಗೊಳಿಸುತ್ತಿರುವ ವೀಡಿಯೋ ಒಂದನ್ನು ಮಾಧ್ಯಮ ಸಂಸ್ಥೆ ಎ ಎನ್ ಐ ಹಂಚಿಕೊಂಡಿದೆ. ರಾಹುಲ್ ಗಾಂಧಿ ಅವರ ವಯನಾಡ್ ಕಚೇರಿಯ ಗೋಡೆಯನ್ನು ಹತ್ತಿ ಅದನ್ನು ಧ್ವಂಸಗೊಳಿಸುತ್ತಿದ್ದಾಗ, ಗೂಂಡಾಗಳು ಎಸ್‌ಎಫ್‌ಐ ಧ್ವಜಗಳನ್ನು ಹಿಡಿದಿದ್ದರು ಎಂದು ಭಾರತೀಯ ಯುವ ಕಾಂಗ್ರೆಸ್ ಟ್ವೀಟ್‌ನಲ್ಲಿ ಆರೋಪಿಸಿದೆ. “ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಎಸ್‌ಎಫ್‌ಐ ಕಾರ್ಯಕರ್ತರು ಮತ್ತು ಮುಖಂಡರ ಗುಂಪು ವಯನಾಡ್ ಸಂಸದ ರಾಹುಲ್ […]