ಸೆನ್ಸೆಕ್ಸ್, ನಿಫ್ಟಿ ಏರಿಕೆಯೊಂದಿಗೆ ಆರಂಭ : ಮಧ್ಯಪ್ರಾಚ್ಯ ಬಿಕ್ಕಟ್ಟಿನ ಆತಂಕ ಮಾಯ
ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಉತ್ತೇಜನಕಾರಿ ಪ್ರವೃತ್ತಿಗಳು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದ್ದರಿಂದ ಭಾರತದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡವು.30 ಷೇರುಗಳ ಸೆನ್ಸೆಕ್ಸ್ 416.22 ಪಾಯಿಂಟ್ ಅಥವಾ ಶೇಕಡಾ 0.63 ರಷ್ಟು ಏರಿಕೆ ಕಂಡು 66,495.58 ಪಾಯಿಂಟ್ಗಳಿಗೆ ತಲುಪಿದ್ದರೆ, ವಿಶಾಲ ನಿಫ್ಟಿ 120 ಪಾಯಿಂಟ್ಸ್ ಅಥವಾ ಶೇಕಡಾ 0.61 ರಷ್ಟು ಏರಿಕೆ ಕಂಡು 19,809.85 ಪಾಯಿಂಟ್ಗಳಿಗೆ ತಲುಪಿದೆ. ಬುಧವಾರದ ಆರಂಭಿಕ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆಗಳು ಏರಿಕೆ ಕಂಡಿವೆ. ಇಂದಿನ ಷೇರು ಮಾರುಕಟ್ಟೆಗಳ ಪ್ರವೃತ್ತಿಯ […]