ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸೀನಿಯರ್ಸ್ ಡೇ ಕಾರ್ಯಕ್ರಮ
ಕುಂದಾಪುರ: ಆಗಸ್ಟ್ 27 ರಂದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಸೀನಿಯರ್ಸ್ ಡೇ ಅನ್ನು ಆಯೋಜಿಸಲಾಗಿತ್ತು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಥೈಲ್ಯಾಂಡ್ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆಯಲ್ಲಿ ಕಂಚಿನ ಪದಕ ಪಡೆದ ವಿದ್ಯಾರ್ಥಿ ಅಜಯ್ ದೇವಾಡಿಗ ಅವರನ್ನು ಕುಂದಾಪುರ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಸನ್ಮಾನಿಸಲಾಯಿತು. ಅವರೊಂದಿಗೆ ಭಾಗವಹಿಸಿದ ಪವನ್ ಪೂಜಾರಿ, ಚೇತನ್, ಭರತ್ ತರಬೇತುದಾರ ಕೀರ್ತಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ […]