ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ ಇನ್ನಿಲ್ಲ
ಉಡುಪಿ: ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಮಲ್ಪೆ ವಾಸುದೇವ ಸಾಮಗ (71) ಅವರು ಶನಿವಾರ ಮುಂಜಾನೆ ನಿಧನ ಹೊಂದಿದರು. ಅವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನರಾದರು. ಪ್ರಸಿದ್ಧ ಯಕ್ಷಗಾನ ವಿದ್ವಾಂಸ ಕಲಾವಿದ ಮಲ್ಪೆ ರಾಮದಾಸ ಸಾಮಗರ ಪುತ್ರ , ತಂದೆ ಮತ್ತು ದೊಡ್ಡಪ್ಪ ಯಕ್ಷ ದಿಗ್ಗಜರೆನಿಸಿದ್ದ ಮಲ್ಪೆ ಶಂಕರನಾರಾಯಣ ಸಾಮಗರೇ ಇವರ ಗುರುಗಳು. ಅತ್ಯಂತ ಧೀಮಂತಿಕೆಯ ಅರ್ಥಧಾರಿ. ಪ್ರಾಯಃ ಮುಂದೆ ಅಂಥಹ ಧೀಮಂತಿಕೆ ಅಧ್ಯಯನಪೂರ್ಣತೆ ಇರುವ ಕಲಾವಿದರೇ ಅಪರೂಪವಾದಾರು . […]