ಎಸ್‌ಡಿಎಂ ಕಾಲೇಜಿನ ವಾರ್ಷಿಕೋತ್ಸವದಲ್ಲಿ ‘ರಿಷಬ್‌ ಶೆಟ್ಟಿ’ ಕನಸು ಸಕಾರಗೊಳ್ಳಲು ಪರಿಶ್ರಮ ಅಗತ್ಯ

ಉಡುಪಿ: ಕನಸು ಕಾಣುವುದು ಮಾತ್ರ ಮುಖ್ಯವಲ್ಲ. ಅದನ್ನು ಸಕಾರಗೊಳಿಸಲು ಪರಿಶ್ರಮದೊಂದಿಗೆ ಮುನ್ನಡೆಯಬೇಕು ಎಂದು ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಹೇಳಿದರು. ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾಲೇಜಿನ ೬೦ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಾನು ಕುಂದಾಪುರದ ಹಳ್ಳಿಯೊಂದರಲ್ಲಿ ಬೆಳೆದ ಹುಡುಗನಾಗಿದ್ದು, ನನ್ನದೇ ಆದ ಕಲ್ಪನಾ ಲೋಕದಲ್ಲಿದ್ದೆ. ಆದರೆ ಬೆಂಗಳೂರಿನಲ್ಲಿ ಆ ಕಲ್ಪನೆಗಳನ್ನೇ ಕನಸನ್ನಾಗಿಸಿ, ಕನಸುಗಳನ್ನೇ ಗುರಿಯಾಗಿಸಿ ಪ್ರಯತ್ನಪಟ್ಟು ಯಶಸ್ಸು ನನ್ನದಾಗಿಸಿಕೊಂಡೆ. ಹಾಗಾಗಿ ಕನಸು ಕಾಣುವುದರಲ್ಲಿ ಮಾತ್ರ ಸೀಮಿತವಾಗದೇ ಅದನ್ನು […]