ಸ್ಕೂಟರ್- ಟ್ಯಾಂಕರ್ ಮುಖಾಮುಖಿ ಡಿಕ್ಕಿ: ತಂದೆ ಮಗಳು ಸ್ಥಳದಲ್ಲೇ ಸಾವು

ಯಲ್ಲಾಪುರ: ಸ್ಕೂಟರ್ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಮಗಳು ಸ್ಥಳದಲ್ಲೇ ಸಾವನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಇಂದು ಸಂಭವಿಸಿದೆ. ಯಲ್ಲಾಪುರದ ಅರೆಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ನಡೆದಿದೆ. 56 ವರ್ಷದ ವಿನೋದ್ ಕಿಂದಳಕರ್ ಹಾಗೂ ಅವರ 12 ವರ್ಷದ ಮಗಳು ಸುನೇಹಾ ಕಿಂದಳಕರ್ ಮೃತ ದುರ್ದೈವಿಗಳು .