ಕಾನ್ಪುರ: 10 ಅಡಿ ಉದ್ದದ ಸುರಂಗ ಕೊರೆದು ಬ್ಯಾಂಕ್ ನಿಂದ 1 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಬ್ಯಾಂಕ್‌ ಒಂದರಲ್ಲಿ ಕಳ್ಳರು 1 ಕೋಟಿ ರೂ ಮೌಲ್ಯದ ಚಿನ್ನಾಭರಣ ದೋಚಿರುವ ಬಗ್ಗೆ ವರದಿಯಾಗಿದೆ. 10 ಅಡಿ ಉದ್ದದ ಸುರಂಗದ ಮೂಲಕ ಬ್ಯಾಂಕ್‌ನ ಲಾಕರ್ ರೂಂ ಪ್ರವೇಶಿಸಿರುವ ಕಳ್ಳರು 1.8 ಕೆ.ಜಿ ಬಂಗಾರ ದೋಚಿದ್ದಾರೆ. ಇದರ ಮೌಲ್ಯ ಸುಮಾರು 1 ಕೋಟಿ ರೂ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಭಾನುತಿ ಶಾಖೆಯ ಪಕ್ಕದಲ್ಲಿರುವ ಖಾಲಿ ಜಾಗದಿಂದ ಅವರು 4 ಅಡಿ ಅಗಲ 10 ಅಡಿ ಉದ್ದದ […]

ತನ್ನ ಗ್ರಾಹಕರಿಗಾಗಿ ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಪ್ರಾರಂಭಿಸಿದ ಎಸ್.ಬಿ.ಐ

ನವದೆಹಲಿ: ಭಾರತದ ತನ್ನ ಗ್ರಾಹಕರಿಗೆ ಬ್ಯಾಂಕಿಂಗ್ ಅನ್ನು ಸುಲಭಗೊಳಿಸಲು ದೇಶದ ಅತಿ ದೊಡ್ಡ ಬ್ಯಾಂಕ್ ಎಸ್.ಬಿ.ಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭಿಸಿದೆ. ಈಗ, ಎಸ್‌ಬಿಐ ಗ್ರಾಹಕರು ವಾಟ್ಸಾಪ್ ಬಳಸಿಕೊಂಡು ಕೆಲವು ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು. ಗ್ರಾಹಕರು ಇನ್ನು ಮುಂದೆ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕಾಗಿಲ್ಲ ಅಥವಾ ಎಟಿಎಂಗೆ ಹೋಗಬೇಕಾಗಿಲ್ಲ. ಎಸ್.ಬಿ.ಐ ಗ್ರಾಹಕರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪಡೆಯಬಹುದು ಮತ್ತು ವಾಟ್ಸಾಪ್ ನಲ್ಲಿ ಮಿನಿ ಸ್ಟೇಟ್ಮೆಂಟ್ ಅನ್ನು ವೀಕ್ಷಿಸಬಹುದು. ಗ್ರಾಹಕರು 919022690226 ಸಂಖ್ಯೆಗೆ ‘ಹಾಯ್’ ಎಂದು ಸಂದೇಶ ಕಳುಹಿಸಿ […]

ವಂಚನೆಯ ಬಗ್ಗೆ ತನ್ನ ಗ್ರಾಹರಿಕೆ ಎಚ್ಚರಿಕೆ ನೀಡಿದ ಎಸ್.ಬಿ.ಐ: ಈ ದೂರವಾಣಿ ಸಂಖ್ಯೆಗಳಿಂದ ದೂರವಿರಿ ಎಂದ ಬ್ಯಾಂಕ್

  ನವದೆಹಲಿ: ದೇಶದಾದ್ಯಂತ ಹರಡುತ್ತಿರುವ ಫಿಶಿಂಗ್ ವಂಚನೆಯ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ತನ್ನ ಗ್ರಾಹಕರಿಗೆ ಟ್ವೀಟ್‌ಗಳು, ಎಸ್.ಎಮ್.ಎಸ್ ಗಳು ಮತ್ತು ಇಮೇಲ್‌ಗಳು ಸೇರಿದಂತೆ ವಿವಿಧ ಮೂಲಗಳ ಮೂಲಕ ಹಣವನ್ನು ವಂಚಿಸಲು ಬ್ಯಾಂಕ್‌ನ ಹೆಸರನ್ನು ಬಳಸುವ ಎಸ್.ಬಿ.ಐ ಫಿಶಿಂಗ್ ಹಗರಣದ ಬಗ್ಗೆ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ವಂಚನೆಗಳಿಂದ ಸುರಕ್ಷಿತವಾಗಿರಲು, ಎಸ್‌ಬಿಐ ತನ್ನ ಗ್ರಾಹಕರಿಗೆ +91-8294710946 ಅಥವಾ +91-7362951973 ಕರೆಗಳನ್ನು ಸ್ವೀಕರಿಸದಂತೆ ಕೇಳಿಕೊಂಡಿದೆ. […]