ಗೃಹಸಾಲ ಪಡೆಯುವ ಗ್ರಾಹಕರಿಗೆ ಎಸ್‌ಬಿಐನಿಂದ ಬಂಪರ್ ಕೊಡುಗೆ

ಮುಂಬೈ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಗೃಹಸಾಲ ಪಡೆಯುವ ಗ್ರಾಹಕರಿಗೆ ಬಂಪರ್ ಕೊಡುಗೆ ಘೋಷಿಸಿದೆ. ಕ್ರೆಡಿಟ್‌ ಸ್ಕೋರ್‌ ಆಧಾರದ ಮೇಲೆ, ಗೃಹಸಾಲದ ಮೊತ್ತ ಎಷ್ಟೇ ಇದ್ದರೂ ಶೇಕಡ 6.70ರಿಂದ ಬಡ್ಡಿದರ ಆರಂಭವಾಗಲಿದೆ. ಈ ಹಿಂದೆ, ₹ 75 ಲಕ್ಷಕ್ಕಿಂತ ಅಧಿಕ ಮೊತ್ತದ ಗೃಹಸಾಲ ಪಡೆಯುವವರು ಶೇ 7.15ರಷ್ಟು ಬಡ್ಡಿ ನೀಡಬೇಕಿತ್ತು. ಹೊಸ ಕೊಡುಗೆಯ ಅಡಿ, ಗ್ರಾಹಕರು ಶೇ 6.70ರ ಬಡ್ಡಿ ದರದಲ್ಲಿ ಯಾವುದೇ ಮೊತ್ತದ ಗೃಹಸಾಲ ಪಡೆಯಬಹುದು ಎಂದು ಎಸ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.