ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಣ್ಣು ಉಳಿಸಿ ಜಾಗೃತಿ ಕಾರ್ಯಕ್ರಮ

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಯುತ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಮಣ್ಣಿನ ರಕ್ಷಣೆ ಕುರಿತು ಮಣ್ಣು ಉಳಿಸಿ ಜಾಗೃತಿ ಕಾರ್ಯಕ್ರಮ ಸೆಪ್ಟೆಂಬರ್ 20ರಂದು ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಲ್ಕತ್ತದ ಸಾಹಿಲ್ ಝಾ ಮಾತನಾಡಿ, ಮಣ್ಣು ನಮ್ಮ ಪರಿಸರ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿದೆ. ಸುಸ್ಥಿರ ಕೃಷಿ ಮತ್ತು ಪರಿಸರಕ್ಕಾಗಿ ಮಣ್ಣನ್ನು ಉಳಿಸಬೇಕಾಗಿದೆ. ಮಣ್ಣಿನ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ನಿತ್ಯವೂ ದೇಶಾದ್ಯಂತ ಸಾವಿರಾರು ಕಿಲೋಮೀಟರ್ ಸೈಕಲ್ ನಲ್ಲಿ ಸಂಚರಿಸುತ್ತಿದ್ದೇನೆ. ಮಣ್ಣು ಕುರಿತು ಮಾತಾಡಿ, […]

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಮಣ್ಣು ಉಳಿಸಿ ಅಭಿಯಾನ

ಗಣಿತನಗರ: ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಈಶ ಫೌಂಡೇಶನ್‌ಗಳ ಸಂಯುಕ್ತ ಆಶ್ರಯದಲ್ಲಿ ಮಣ್ಣು ಉಳಿಸಿ ಅಭಿಯಾನ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಣ್ಣು ಉಳಿಸಿ ಅಭಿಯಾನದ ಸ್ವಯಂಸೇವಕ ಮತ್ತುನಿಟ್ಟೆ ಯುನಿವರ್ಸಿಟಿ ಪ್ರೊಫೆಸರ್ ಸಭ್ಯತ್ ಶೆಟ್ಟಿ, ಸದ್ಗುರು ಜಗ್ಗಿ ವಾಸುದೇವ್ ರವರು ಸಂಘಟಿಸಿ ನಡೆಸುತ್ತಿರುವ ವಿಶ್ವಮಟ್ಟದ ಮಣ್ಣು ಉಳಿಸಿ ಅಭಿಯಾನದ ಹಿನ್ನೆಲೆ, ಮಹತ್ವವನ್ನು ವಿವರಿಸಿದರು. ಮಣ್ಣು ಉಳಿಸಿ ಅಭಿಯಾನದ ಸ್ವಯಂಸೇವಕರಾದ ಯಶ್ ಶೆಟ್ಟಿ, ಮಂಗಳಾ ಚಂದ್ರಕಾಂತ್, ಪದ್ಮಜಾ, ರಾಜೇಶ್ ಪ್ರಭು, ಪ್ರೀತೇಶ್ […]

ಉಡುಪಿಯಲ್ಲಿ ಸದ್ಗುರು ಭಾರತ ಸ್ವಾಗತ ಕಾರ್ಯಕ್ರಮ

ಉಡುಪಿ: ಇಲ್ಲಿನ ಮಣ್ಣು ಉಳಿಸಿ ಸ್ವಯಂಸೇವಕರು ಮೇ 28 ರಂದು ಉಡುಪಿಯ ಕಾರ್ ಸ್ಟ್ರೀಟ್‌ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ಭಾರತ ಪ್ರಯಾಣದ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ನಡೆಸಿದರು. ಮಣ್ಣು ಉಳಿಸುವ ಉಪಕ್ರಮವನ್ನು ಉತ್ತೇಜಿಸಲು ಜಗತ್ತಿನಾದ್ಯಂತ ಭೇಟಿ ನೀಡಿದ ನಂತರ ಸದ್ಗುರುಗಳು ದೇಶಕ್ಕೆ ಮರಳಿದ್ದು ಅವರನ್ನು ಸ್ವಾಗತಿಸಲು ಈ ಕಾರ್ಯಕ್ರಮವನ್ನು ನಡೆಸಲಾಯಿತು. ಮಹೇಶ್ ರಾವ್ ಅವರಿಂದ ರಂಗೋಲಿ, ಶ್ವೇತಾ ಹೆಬ್ಬಾರ್ ಮತ್ತು ತಂಡದಿಂದ ಜಾನಪದ ನೃತ್ಯ, ಅರ್ಜುನ್ ಮತ್ತು ಧೀರಜ್ ಅವರಿಂದ ಯಕ್ಷಗಾನ, ಝೇಂಕಾರ್ ತಂಡದ ಭಜನೆ, ಅಂಬಾ […]

ಇಂದು ಉಡುಪಿಯಲ್ಲಿ ಜಗ್ಗಿ ವಾಸುದೇವ್ ಸದ್ಗುರುರವರ ಸ್ವಾಗತ ಕಾರ್ಯಕ್ರಮ

ಉಡುಪಿ: ಜಗತ್ತಿನಾದ್ಯಂತ ಶತಕೋಟಿ ಹೃದಯಗಳನ್ನು ಮುಟ್ಟಿದ ನಂತರ, ಭಾರತಕ್ಕೆ ಮರಳುತ್ತಿರುವ ಸದ್ಗುರುಗಳನ್ನು ಸ್ವಾಗತಿಸುವ ಕಾರ್ಯಕ್ರಮದ ಅಂಗವಾಗಿ ಇಂದು ಸಂಜೆ ಸಂಜೆ 4.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಗರದ ಕಾರ್ ಸ್ಟ್ರೀಟ್ ನಲ್ಲಿ ಜರುಗಲಿದೆ. ಕಾರ್ಯಕ್ರಮದ ವಿವರಗಳು: ಹೆಸರಾಂತ ಕಲಾವಿದ ಮಹೇಶ್ ರಾವ್ ಅವರಿಂದ ರಂಗೋಲಿ ಬಿಡಿಸುವ ಕಾರ್ಯಕ್ರಮ. ಶ್ರಾವ್ಯ ಹಿರಿಯಡ್ಕ ಶಿಷ್ಯರು ಮತ್ತು ಶ್ವೇತಾ ಮತ್ತು ತಂಡದವರಿಂದ ಭರತನಾಟ್ಯ ಪ್ರದರ್ಶನ. ಝೇಂಕಾರ್ ಟ್ರೂಪ್ ಎಸ್‌ಎಲ್‌ವಿಟಿಯಿಂದ ದಿವ್ಯ ಭಜನೆ. ಅರ್ಜುನ್ ಮತ್ತು ತಂಡದವರಿಂದ ಯಕ್ಷಗಾನ ಪ್ರದರ್ಶನ. ಪರ್ಕಳ ತಂಡದಿಂದ […]

ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಮಣ್ಣು ಉಳಿಸಿ ಅಭಿಯಾನ ಕಾರ್ಯಕ್ರಮ

ಕುಂದಾಪುರ: ಮಣ್ಣಿನ ನೈಸರ್ಗಿಕ ಗುಣಲಕ್ಷಣಗಳು ಹಾಗೂ ಸ್ವರೂಪಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಕೃತಕ ರಾಸಾಯನಿಕ ಗೊಬ್ಬರಗಳ ಬಳಕೆ ಹಾಗೂ ವಿಷಪೂರಿತ ತ್ಯಾಜ್ಯದಿಂದಾಗಿ ಮಣ್ಣಿನ ಮಾಲಿನ್ಯ ಹೆಚ್ಚುತ್ತಿರುವುದು ಆತಂಕಕಾರಿಯಾದ ವಿಷಯ ಎಂದು ಇಶಾ ಫೌಂಡೇಶನ್ ಕೊಯಮುತ್ತೂರು ಇದರ ಸ್ವಯಂ ಸೇವಕರಾದ ಶ್ರೀ ಬಿ.ಎನ್. ವೆಂಕಟೇಶ್‌ ಹೇಳಿದರು. ಅವರು ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಎನ್.ಎಸ್.ಎಸ್ ಘಟಕ ಹಾಗೂ ಇಶಾ ಫೌಂಡೇಶನ್ ಆಯೋಜಿಸಿದ ಮಣ್ಣು ಉಳಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುತ್ತಿರುವ ಮಣ್ಣನ್ನು […]