ಕಲಾವಿದ ಸತೀಶ್ಚಂದ್ರ ಅವರ ಕುಂಚದಿಂದ ಮೂಡಿಬಂತು ಕಾಂತಾರದ ಪಂಜುರ್ಲಿ ದೈವ!
ಮಣಿಪಾಲ: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ ಮಾಡಿದ ಭೂತಾರಾಧನೆ ಕುರಿತ ಕಾಂತಾರ ಚಿತ್ರದ ಪಂಜುರ್ಲಿ ದೈವದ ಅಕ್ರಿಲಿಕ್ ಚಿತ್ರವನ್ನು ಮಣಿಪಾಲದ ಕಲಾವಿದ ಸತೀಶ್ಚಂದ್ರ ಅವರು ಅದ್ಭುತವಾಗಿ ಕುಂಚದಲ್ಲಿ ಸೆರೆಹಿಡಿದಿದ್ದು, ಇದು ಎಲ್ಲೆಡೆ ವೈರಲ್ ಆಗಿದೆ. ದೈವದ ಕಾಲಿನ ಗಗ್ಗರ ಇವರ ಕೈ ಚಳಕದ ಸ್ವಂತ ರಚನೆಯಾಗಿದೆ. ಸತೀಶ್ಚಂದ್ರ ಲಯನ್ಸ್ ಸಂಸ್ಥೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾಗಿದ್ದರು. ತರಂಗ ವಾರಪತ್ರಿಕೆಯಲ್ಲಿ ಇವರ ಚಿತ್ರಗಳು ಪ್ರಕಟವಾಗುತ್ತಿರುತ್ತವೆ.