ಸಸಿಹಿತ್ಲು: ಸಮುದ್ರಕ್ಕಿಳಿದ ಇಬ್ಬರು ಯುವಕರು ನೀರುಪಾಲು

ಮಂಗಳೂರು: ಸಮುದ್ರಕ್ಕೆ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲಾದ ಘಟನೆ ಮಂಗಳೂರಿನ ಸಸಿಹಿತ್ಲು ಬೀಚ್ ನಲ್ಲಿ ಭಾನುವಾರ ಸಂಭವಿಸಿದೆ. ಸ್ನಾನಕ್ಕಿಳಿದ ವೇಳೆ ಘಟನೆ ನಡೆದಿದ್ದು, ಬಜ್ಪೆ ನಿವಾಸಿ ಸುಜಿತ್ (32), ಕಾವೂರಿನ ಗುರುಪ್ರಸಾದ್ (28) ಮೃತಪಟ್ಟಿದ್ದಾರೆ. ಇನ್ನಿಬ್ಬರು ನೀರುಪಾಲಾಗುತ್ತಿದ್ದಾಗ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಅದರಲ್ಲಿ ಒರ್ವನ ಸ್ಥಿತಿ ಗಂಭೀರವಾಗಿದೆ. ಸಮೀಪದಲ್ಲಿ ಆಯೋಜಿಸಿದ ‘ಕೆಸರ್ಡೊಂಜಿ ದಿನ’ ಕಾರ್ಯಕ್ರಮದ ಬಳಿಕ ಯುವಕರು ಸ್ನಾನಕ್ಕೆಂದು ಸಮುದ್ರಕ್ಕೆ ತೆರಳಿದ್ದರು. ಮೂಲ್ಕಿ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.