ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಉಡುಪಿ ಲಾಡ್ಜ್ ನಲ್ಲಿ ಮತ್ತೋರ್ವ ಯುವಕನ ಆತ್ಮಹತ್ಯೆ

ಉಡುಪಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಶಾಂಭವಿ ಹೋಟೆಲ್ ಉಡುಪಿಯಲ್ಲಿ ಮತ್ತೋರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಡ್ಜ್ ನಲ್ಲಿ ಮೃತರಾದವರು ಮಂಗಳೂರು ಕೊಣಾಜೆಯ ಶರಣ್ ರಾಜ್ (31) ಎಂದು ಗುರುತಿಸಲಾಗಿದೆ. ಶರಣ್ ನಿನ್ನೆ ರಾತ್ರಿ ಶಾಂಭವಿ ಲಾಡ್ಜಿನ ಕೋಣೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣವಾಗಿದೆ. ಶಾಂಭವಿ ಹೋಟೆಲ್ ಮಾಲಕರು ಇತ್ತೀಚೆಗಷ್ಟೇ ತನ್ನ ಹೋಟೆಲಿನಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಿ ಹೆಸರು ಬದಲಾಯಿಸಿದ್ದರು. ಉಡುಪಿ ನಗರ ಠಾಣೆ ಪೊಲೀಸರು […]