ಸಾರ್ವಜನಿಕರಿಗಾಗಿ10 ದಿನಗಳ ಉಚಿತ ಸಂಸ್ಕೃತ ಸಂಭಾಷಣ ಶಿಬಿರ
ಉಡುಪಿ: ತೆಂಕು ಪೇಟೆಯ ಸಂಸ್ಕೃತ ಭಾರತೀ ಕಾರ್ಯಾಲಯದಲ್ಲಿ ಸಾರ್ವಜನಿಕರಿಗಾಗಿ 10 ದಿನಗಳ ಉಚಿತ ಸಂಸ್ಕೃತ ಸಂಭಾಷಣ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರವು ಜೂನ್ 10ನೇ ತಾರೀಕು ಶನಿವಾರದಂದು ಆರಂಭವಾಗಿ ಹತ್ತು ದಿನಗಳವರೆಗೆ ಪ್ರತೀ ದಿನ ಸಾಯಂಕಾಲ 5:00 ರಿಂದ 7:00 ಗಂಟೆಯವರೆಗೆ ನಡೆಯಲಿದೆ. ಶಿಬಿರದಲ್ಲಿ 14 ವರ್ಷ ಮೇಲ್ಪಟ್ಟವರೆಲ್ಲರೂ ಭಾಗವಹಿಸಬಹುದು. ಗರಿಷ್ಠ ವಯೋಮಿತಿ ಇರುವುದಿಲ್ಲ. ಸಂಸ್ಕೃತದ ಪೂರ್ವ ಜ್ಞಾನ ಬೇಕಾಗಿಲ್ಲ. ಯಾವುದೇ ಜಾತಿ, ಲಿಂಗ ಭೇದವಿಲ್ಲದೆ ಯಾರೂ ಭಾಗವಹಿಸಬಹುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ವಿನಂತಿ. […]
ಭಗವಂತನ ಸಾಕ್ಷಾತ್ಕರಿಸುವ ಸಂಸ್ಕೃತವು ಸರ್ವ ಭಾಷೆಗಳ ತಾಯಿ: ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ
ಉಡುಪಿ: ಮಧ್ವಾಚಾರ್ಯರ ಗುರುಗಳಾದ ಅಚ್ಯುತಪ್ರಜ್ಞಾಚಾರ್ಯರು ಉಡುಪಿಯಲ್ಲಿ ಹಿಂದಿನಿಂದಲೂ ತತ್ತ್ವವಾದದ ಶಾಲೆಯನ್ನು ಆರಂಭಿಸಿದ್ದರು. ಅದನ್ನೇ ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತ ಪಾಠಶಾಲೆಯು ಬೋಧಿಸುತ್ತಿದೆ. ಪರಮಾತ್ಮನು ತ್ರೈಕಾಲಿಕವಾಗಿಯೂ ಸತ್ಯನಾದವನು. ಅವನನ್ನು ತಿಳಿಸುವ ಭಾಷೆಯಾದ ಸಂಸ್ಕೃತ ಭಾಷೆಯೂ ಕೂಡ ಎಂದಿಗೂ ಬದಲಾವಣೆಯಾಗದೇ ಎಲ್ಲಾ ಭಾಷೆಗಳ ತಾಯಿಯೆಂದೆನಿಸಿ ಸತ್ಯವಾಗಿದೆ. ಭಗವಂತನಿಗೂ ಸಂಸ್ಕೃತಕ್ಕೂ ಬಿಂಬ – ಪ್ರತಿಬಿಂಬ ಭಾವವು ಇದೆ ಎಂಬುವುದನ್ನು ಋಗ್ವೇದವು ಪ್ರತಿಪಾದಿಸುತ್ತಿದೆ. ಪ್ರತಿಯೊಂದು ಭಾಷೆಯಿಂದಲೂ ಭಗವಂತನನ್ನು ಸ್ತುತಿಸಬಹುದು ಅದು ಭಗವಂತನನ್ನು ತಲುಪುವುದು ಆದರೆ ಸಂಸ್ಕೃತದಲ್ಲಿ ಮಾಡಿದ ಪ್ರಾರ್ಥನೆಯು ಎಲ್ಲಾ ವಿಧವಾದ ಪ್ರಾರ್ಥನೆಗಳನ್ನೊಳಗೊಂಡಿದೆ ಎಂದು ಶ್ರೀ […]
ಕಾಶಿ-ತಮಿಳು ಸಂಗಮ ಕಾರ್ಯಕ್ರಮ ದೇಶವನ್ನು ಏಕಸೂತ್ರದಲ್ಲಿ ಬೆಸೆಯುವ ಪ್ರಯತ್ನ: ಪ್ರಧಾನಿ ಮೋದಿ
ವಾರಣಾಸಿ: ಇಲ್ಲಿ ಒಂದು ತಿಂಗಳ ಕಾಲ ನಡೆಯುವ ಕಾಶಿ-ತಮಿಳು ಸಂಗಮವನ್ನು ಶನಿವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಶಿ-ತಮಿಳು ಸಂಗಮವು ಗಂಗಾ-ಯಮುನಾ ಸಂಗಮದಷ್ಟು ಪವಿತ್ರವಾಗಿದೆ ಎಂದು ಹೇಳಿದರು. ತಮಿಳಿನ ರೂಪದಲ್ಲಿ ಪ್ರಪಂಚದ ಅತ್ಯಂತ ಹಳೆಯ ಭಾಷೆ ನಮ್ಮಲ್ಲಿದೆ ಎಂಬುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಈ ಪರಂಪರೆಯನ್ನು ಉಳಿಸುವುದರ ಜೊತೆಗೆ ಶ್ರೀಮಂತಗೊಳಿಸಬೇಕು. ಕಾಶಿ-ತಮಿಳು ಸಂಗಮ ಕಾರ್ಯಕ್ರಮವು ಶತಮಾನಗಳ-ಹಳೆಯ ಜ್ಞಾನದ ಬಂಧ ಮತ್ತು ಉತ್ತರ ಮತ್ತು ದಕ್ಷಿಣದ ನಡುವಿನ ಪ್ರಾಚೀನ ನಾಗರಿಕತೆಯ ಸಂಬಂಧವನ್ನು ಮರುಶೋಧಿಸುವ ಗುರಿಯನ್ನು ಹೊಂದಿದೆ. ಭಾಷೆಯ ಆಧಾರದ […]
ದೇಶದಲ್ಲಿ ಸಂಸ್ಕೃತ ಮಾತನಾಡುವ ಜನಸಂಖ್ಯೆ ಕೇವಲ 24,821! ಅಳಿವಿನಂಚಿನಲ್ಲಿದೆ ಭಾರತದ ದೇವ ಭಾಷೆ
ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯ ಭಾಷಾ ವಿಭಾಗವು ಆಗ್ರಾ ಮೂಲದ ಶಸ್ತ್ರಚಿಕಿತ್ಸಕ ಮತ್ತು ಸಾಮಾಜಿಕ ಕಾರ್ಯಕರ್ತ ಡಾ. ದೇವಾಶಿಶ್ ಭಟ್ಟಾಚಾರ್ಯ ಅವರು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಉತ್ತರವಾಗಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಡಾ.ಭಟ್ಟಾಚಾರ್ಯ ಅವರು ಪಡೆದ ಮಾಹಿತಿಯ ಪ್ರಕಾರ, 2011 ರ ಜನಗಣತಿಯ ಪ್ರಕಾರ, ಭಾರತೀಯ ಜನಸಂಖ್ಯೆಯ ಶೇಕಡಾ 0.002 ರಷ್ಟು ಜನರು ಮಾತ್ರ ಸಂಸ್ಕೃತವನ್ನು ಮಾತನಾಡುತ್ತಾರೆ. ಡಾ.ಭಟ್ಟಾಚಾರ್ಯರ ಪ್ರಕಾರ, ಸಂವಿಧಾನದಲ್ಲಿ ಸಂಸ್ಕೃತವನ್ನು ಅಲ್ಪಸಂಖ್ಯಾತ ಭಾಷೆ ಎಂದು ಪಟ್ಟಿ […]