ಭಗವಂತನ ಸಾಕ್ಷಾತ್ಕರಿಸುವ ಸಂಸ್ಕೃತವು ಸರ್ವ ಭಾಷೆಗಳ ತಾಯಿ: ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ

ಉಡುಪಿ: ಮಧ್ವಾಚಾರ್ಯರ ಗುರುಗಳಾದ ಅಚ್ಯುತಪ್ರಜ್ಞಾಚಾರ್ಯರು ಉಡುಪಿಯಲ್ಲಿ ಹಿಂದಿನಿಂದಲೂ ತತ್ತ್ವವಾದದ ಶಾಲೆಯನ್ನು ಆರಂಭಿಸಿದ್ದರು. ಅದನ್ನೇ ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತ ಪಾಠಶಾಲೆಯು ಬೋಧಿಸುತ್ತಿದೆ. ಪರಮಾತ್ಮನು ತ್ರೈಕಾಲಿಕವಾಗಿಯೂ ಸತ್ಯನಾದವನು. ಅವನನ್ನು ತಿಳಿಸುವ ಭಾಷೆಯಾದ ಸಂಸ್ಕೃತ ಭಾಷೆಯೂ ಕೂಡ ಎಂದಿಗೂ ಬದಲಾವಣೆಯಾಗದೇ ಎಲ್ಲಾ ಭಾಷೆಗಳ ತಾಯಿಯೆಂದೆನಿಸಿ ಸತ್ಯವಾಗಿದೆ. ಭಗವಂತನಿಗೂ ಸಂಸ್ಕೃತಕ್ಕೂ ಬಿಂಬ – ಪ್ರತಿಬಿಂಬ ಭಾವವು ಇದೆ ಎಂಬುವುದನ್ನು ಋಗ್ವೇದವು ಪ್ರತಿಪಾದಿಸುತ್ತಿದೆ. ಪ್ರತಿಯೊಂದು ಭಾಷೆಯಿಂದಲೂ ಭಗವಂತನನ್ನು ಸ್ತುತಿಸಬಹುದು ಅದು ಭಗವಂತನನ್ನು ತಲುಪುವುದು ಆದರೆ ಸಂಸ್ಕೃತದಲ್ಲಿ ಮಾಡಿದ ಪ್ರಾರ್ಥನೆಯು ಎಲ್ಲಾ ವಿಧವಾದ ಪ್ರಾರ್ಥನೆಗಳನ್ನೊಳಗೊಂಡಿದೆ ಎಂದು ಶ್ರೀ […]