18 ರಿಂದ 30 ವರ್ಷದ ಯುವಕರು ಕುಡಿತದ ಚಟಕ್ಕೆ ಬಿದ್ದಿರುವ ವ್ಯವಸ್ಥೆ ಬಂದಿದೆ: ಕುದಿ ವಸಂತ್ ಶೆಟ್ಟಿ
ಹಿರಿಯಡಕ : ಅಪ್ಪ, ಅಮ್ಮನ ಜವಾಬ್ದಾರಿ ಮಕ್ಕಳಿಗೆ ಶಿಕ್ಷಣವನ್ನು ಕೊಡುವುದು. ಆ ಶಿಕ್ಷಣವನ್ನು ಸರಿಯಾಗಿ ಕೊಡುವುದರ ಜೊತೆಗೆ ಮಗುವಿಗೆ ತಿಳಿವಳಿಕೆ ಕೊಡುವಂತಹ ವಾತಾವರಣ ಬೇಕು. . 18 ರಿಂದ 30 ವರ್ಷದ ಯುವಕರು ಕುಡಿತದ ಚಟಕ್ಕೆ ಬಿದ್ದಿರುವ ವ್ಯವಸ್ಥೆ ಬಂದಿದೆ ಎಂದರೆ ತಂದೆ ತಾಯಿ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದೇ ಅರ್ಥ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಕುದಿ ಶ್ರೀ ವಿಷ್ಣುಮೂರ್ತಿ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಕುದಿ ವಸಂತ್ ಶೆಟ್ಟಿ ಹೇಳಿದ್ದಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ […]
ಡಿ.25ರಂದು ಮೂವರು ಸಾಧಕರಿಗೆ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳಿಂದ ಸನ್ಮಾನ
ಉಡುಪಿ: ಸಹಕಾರ ರತ್ನ, ಶ್ರೇಷ್ಠ ಸಹಕಾರಿ ಪ್ರಶಸ್ತಿ ಪಡೆದ ಮೂವರು ಸಾಧಕರಿಗೆ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಇದೇ ಬರುವ ಡಿ.25ರಂದು ಮಧ್ಯಾಹ್ನ 2.30ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಹಕಾರ ಕ್ಷೇತ್ರಕ್ಕೆ ಸಲ್ಲಿಸಿದ ಸಾಧನೆಯನ್ನು ಪರಿಗಣಿಸಿ ಕೃಷ್ಣರಾಜ ಸರಳಾಯ ಹಾಗೂ ಸರಳಾ ಬಿ.ಕಾಂಚನ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಲಾಗಿದೆ. ಬಡಗುಬೆಟ್ಟು ಕೋ ಆಪರೇಟಿವ್ […]